ವಾಷಿಂಗ್ಟನ್: ನಾನು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದಾಗಿ ಚರ್ಚಿಸಿದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹೇಗೆ ಆಗುತ್ತದೆ ಎಂದು ಇಟಲಿ ಪ್ರಧಾನಿ ಜಾಜಿಯಾ ಮೆಲೋನಿ ಅವರು ಎಡಪಂಥೀಯ ನಾಯಕರಿಗೆ ಪ್ರಶ್ನಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ಇಂದು(ಫೆಬ್ರವರಿ.24) ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫ್‌ರೆನ್ಸ್‌ನಲ್ಲಿ ವಿಡಿಯೋ ಮೂಲಕ ಮಾತನಾಡಿದ ಅವರು, ನಾನು, ಮೋದಿ ಹಾಗೂ ಟ್ರಂಪ್‌ನಂತಹ ಬಲಪಂಥೀಯ ನಾಯಕರು ಒಂದಾದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಕೂಗೆಬ್ಬಿಸುತ್ತಾರೆ. ಆದರೆ ಅದೇ ಎಡಪಂಥೀಯ ನಾಯಕರು ಇದೇ ರೀತಿ ಮೈತ್ರಿ ಮಾಡಿಕೊಂಡಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಎಡಪಂಥೀಯರು ಟ್ರಂಪ್ ಅವರ ಗೆಲುವಿನಿಂದ ಆತಂಕಕ್ಕೆ ಒಳಪಟ್ಟಿದ್ದಾರೆ. ಅಲ್ಲದೇ ಕನ್ಸರ್ವೇಟಿವ್‌ಗಳು ಗೆಲ್ಲುತ್ತಿರುವುದು ಮಾತ್ರವಲ್ಲ, ಅಂತಾರರಾಷ್ಟ್ರೀಯ ಮಟ್ಟದಲ್ಲೂ ಒಂದಾಗುತ್ತಿರುವುದು ಎಡಪಂಥೀಯರಿಗೆ ವಿಪರೀತ ಹೊಟ್ಟೆಯುರಿ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.
ಹಿಂದಿನ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಹಾಗೂ ಬಿಲ್‌ಕ್ಲಿಂಟನ್ ಅವರು 90 ದಶಕದಲ್ಲಿ ಅಂತಾರರಾಷ್ಟ್ರೀಯ ಎಡಪಂಥೀಯ ಉದಾರವಾದಿ ನೆಟ್‌ವರ್ಕ್ ರಚಿಸಿದಾಗ ಅವರನ್ನು ಮುತ್ಸದ್ದಿಗಳು ಎಂದು ಕರೆದಿದ್ದರು. ಆದರೆ ಇದೀಗ ನಾನು, ಭಾರತದ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್ ಹಾಗೂ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಅವರು ಪರಸ್ಪರ ಚರ್ಚಿಸಿದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ನಮಗೆ ಎಡಪಂಥೀಯವರ ದ್ವಿಮುಖ ನೀತಿ ಅಭ್ಯಾಸವಾಗಿದೆ. ಅವರು ನಮ್ಮ ಮೇಲೆ ಎಷ್ಟೇ ಕೆಸರು ಎರಚಿದರೂ ಎಡಪಂಥೀಯ ಸುಳ್ಳುಗಳನ್ನು ಸಾರ್ವಜನಿಕರು ನಂಬದೇ ನಮಗೆ ಮತಗಳನ್ನು ಹಾಕುತ್ತಿದ್ದಾರೆ. ನಾವು ಸ್ವಾತಂತ್ರ್ಯವನು ರಕ್ಷಿಸುತ್ತೇವೆ, ಆದೆ ಹಸಿರು ಎಡಪಂಥಯರು ಹುಚ್ಚುತನದಿಂದ ಜನರನ್ನು ರಕ್ಷಿಸುತ್ತೇವೆ ಎಂದು ನುಡಿಯುತ್ತಾರೆ ಎಂದು ತಿಳಿಸಿದರು.