Mysore
21
overcast clouds

Social Media

ಶುಕ್ರವಾರ, 13 ಜೂನ್ 2025
Light
Dark

ಮಹದಾಯಿ ವಿವಾದ : ಕಣಕುಂಬಿಗೆ ಕೇಂದ್ರ ತಂಡ ಭೇಟಿ-ಪರಿಶೀಲನೆ

ಬೆಳಗಾವಿ : ಮಹದಾಯಿ ಯೋಜನೆಗೆ ಗೋವಾ ಸರ್ಕಾರದಿಂದ ಮತ್ತೆ ಕ್ಯಾತೆ ತೆಗೆದಿರುವ ಹಿನ್ನೆಲೆ ಇಂದು ಜಲನಯನ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ ನೀಡಿದೆ.

ಕೇಂದ್ರದಿಂದ ಪರಿಸರ ಇಲಾಖೆ ಅನುಮತಿ ಸಿಗದಂತೆ ನೋಡಿಕೊಳ್ಳಲು ಕುತಂತ್ರ ರೂಪಿಸಿದ್ದು, ಇದರ ಭಾಗವಾಗಿಯೇ ಮಹಾನದಿ ಜಲನಯನ ಪ್ರದೇಶಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಮೂರು ರಾಜ್ಯದ ಅಧಿಕಾರಿಗಳು ಒಳಗೊಂಡ ಸದಸ್ಯರ ತಂಡ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿದೆ.

ಕಳಸಾ ಮತ್ತು ಬಂಡೂರಿ ನಾಲೆ ಉಗಮ ಸ್ಥಾನಕ್ಕೆ ಭೇಟಿ ನೀಡಿದ್ದು ಎರಡೂ ನಾಲೆಯ ನೀರಿನ ಹಲವು ಪರಿಶೀಲನೆ ನಡೆಸಲಿದೆ. ಅಲ್ಲದೆ ಮಹದಾಯಿ ಯೋಜನೆಯ ಕಾಮಗಾರಿಯನ್ನು ಸಹ ಪರಿಶೀಲಿಸಲಿದೆ. ಅಲ್ಲದೆ ಹುಲಿ ಸಂರಕ್ಷಿತಾ ಅರಣ್ಯ ನಿಜವಾಗಿಯೂ ಕಳಸಾ ಅಥವಾ ಬಂಡೂರಿ ನಾಲ ಉಗಮ ಸ್ಥಳದಲ್ಲಿದಿಯಾ..? ಕಾಮಗಾರಿ ಮಾಡುವುದರಿಂದ ಪರಿಸರಕ್ಕೆ ದಕ್ಕೆ ಆಗಲಿದೆಯಾ..? ಹಿಂದಿನ ಬಿಜೆಪಿ ಸರ್ಕಾರ ಪರಿಸರ ದೃಷ್ಟಿಯಲ್ಲಿಟ್ಟುಕೊಂಡು ಡಿಪಿಆರ್‌ ಬದಲಾವಣೆ ಮಾಡಿದ್ದು ಅದರಿಂದ ಏನೆಲ್ಲಾ ಆಗಲಿದೆ ಅಂತ ಮಾಹಿತಿ ಸಂಗ್ರಹಿಸಲಿದೆ. ಜೊತೆಗೆ ಎಲ್ಲಾ ವರದಿಯನ್ನ ಪಡೆದುಕೊಂಡು ನಾಳೆ ಬೆಂಗಳೂರಿನಲ್ಲಿ ಸಭೆ ಮಾಡಿ ಚರ್ಚೆ ಮಾಡಲಿದ್ದಾರೆ. ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ತಂಡ ವರದಿ ಸಲ್ಲಿಸಲಿದೆ.

Tags:
error: Content is protected !!