Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಲೋಕ ಸಮರ 2024: ಹಲವು ವಿಚಿತ್ರ ಸನ್ನಿವೇಶಗಳಿಗೆ ಸಾಕ್ಷಿಯಾದ ಮೂರನೇ ಹಂತದ ಚುನಾವಣೆ

ಬೆಂಗಳೂರು: ದೇಶಾದ್ಯಂತ ಮೂರನೇ ಹಂತದ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ ಏ.26ರಂದು ಮೊದಲ ಹಂತದ ಚುನಾವಣೆ ನಡೆದಿತ್ತು. ಇಂದು (ಮೇ.7) ಎರಡನೇ ಹಂತದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಹಲವು ವಿಚಿತ್ರ ಘಟನೆಗಳಿಗೆ ಈ ಚುನಾವಣೆ ಸಾಕ್ಷಿಯಾಗಿದೆ.

ಇಂದು (ಮೇ.7) ಎರಡನೇ ಹಂತದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಹಲವು ವಿಚಿತ್ರ ಘಟನೆಗಳಿಗೆ ಈ ಚುನಾವಣೆ ಸಾಕ್ಷಿಯಾಗಿದೆ.

ಶಿಕಾರಿಪುರದ ಹಿತ್ತಲ ಗ್ರಾಮದಲ್ಲಿ ಮತಹಾಕಲು ಹೋಗುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಮಡಿದರೇ, ಚುರ್ಚಿಗುಂಡಿಯಿಂದ ಭದ್ರವಾತಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸವಾರ ಮಂಜುನಾಥ್‌ ರಸ್ತೆ ಅಪಘಾತದಲ್ಲಿ ಮಡಿದಿದ್ದಾರೆ.

ಇತ್ತ ಸೊರಬ ತಾಲೂಕಿನ ಕಿಂಸಿ ಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ವೃದ್ಧೆ ಮಲ್ಲಮ್ಮ (96 ವರ್ಷ) ಮರಣ ಹೊಂದಿದ್ದಾರೆ.

ಪತಿ ಸಾವಿನಲ್ಲಿಯೂ ಮತದಾನ ಮಾಡಿದ ಪತ್ನಿ: ಮಂಗಳೂರು ಜಿಲ್ಲೆಯ ಹೊಸ ನಗರ ತಾಲೂಕಿನ ಆಡುಗೋಡಿಯ ವೆಂಕಟೇಶ್‌ ಅವರು ಅನಾರೋಗ್ಯದಿಂದ ಇಂದು ಮೃತರಾದರು. ಇತ್ತ ಪತಿಯ ಸಾವಿನ ನಡುವೆಯೂ ಪತ್ನಿ ಕಲಾವತಿ ಮತಗಟ್ಟೆಗೆ ಹೋಗಿ ಮತಹಾಕಿ, ಮತದಾನದ ಮಹತ್ವವನ್ನು ಸಾರಿದ್ದಾರೆ.

ಕುಡಿದು ರೋದನೆ ನೀಡಿದ ಮತದಾರ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಮತದಾನೊಬ್ಬ ಕುಡಿದು ಬಂದು ರೋದನೆ ನೀಡಿದ್ದಾರೆ. ಗ್ರಾಮದ 154ನೇ ಮತಗಟ್ಟೆಯ ಮತದಾರನೊಬ್ಬ ಮತ ಚಲಾಯಿಸಿದ್ದಾನೆ. ಮತ ಚಲಾಯಿಸುವಾಗಿ ಇವಿಎಂ ಸದ್ದು ಮಾಡುತ್ತಿಲ್ಲ ಎಂದು ರಗಳೆ ತೆಗೆದಿದ್ದಾನೆ. ಬಳಿಕ ಬಂದ ಭದ್ರತಾ ಸಿಬ್ಬಂದಿ ಆತನನ್ನು ಹೊರಗೆ ದೂಡಿದ್ದಾರೆ. ಹೊರ ಬಿದ್ದ ಮತದಾರನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಮತ್ತೊಂದು ವೀಡಿಯೋ ವೈರಲ್‌: ಹಾವೇರಿ ಲೋಕಸಭಾ ಕ್ಷೇತ್ರದ ಮತದಾನ ಮಾಡಿದ ಮತದಾರನೊಬ್ಬ ತಾನು ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದಾನೆ ಮತ್ತು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾನೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags: