ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ ಪಕ್ಷವು ರಾಜ್ಯದ 20 ಕ್ಷೇತ್ರಗಳು ಸೇರಿದಂತೆ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಪ್ರಕಟ ಮಾಡಿದೆ. ಎರಡನೇ ಪಟ್ಟಿಯಲ್ಲಿ ಒಟ್ಟು 72 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿದ್ದು, ಮೈಸೂರಿಗೆ ಅಚ್ಚರಿಯ ಆಯ್ಕೆಯಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದೆ.
ರಾಜ್ಯದ 20 ಕ್ಷೇತ್ರಗಳಿಗೆ ಕಮಲ ಕಲಿಗಳ ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಕೆಲ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಅಚ್ಚರಿ ಬೆಳವಣಿಗೆಯಲ್ಲಿ ಚಾಮರಾಜನಗರದ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯನಿಗೂ ಟಿಕೆಟ್ ಕೈ ತಪ್ಪಿದ್ದು, ಎಸ್. ಬಾಲರಾಜ್ ಅವರ ಪರ ಕೇಂದ್ರ ಬ್ಯಾಟ್ ಬೀಸಿದೆ. ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯನ್ನಾಗಿಸಿದರೆ, ಡಾ. ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರದಿಂದ ಕಣಕ್ಕಿಳಿಸಲು ಬಿಜೆಪಿ ಹೈ ಕಮಾಂಡ್ ಮುಂದಾಗಿದೆ.
ರಾಜ್ಯದ 20 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ.
ಚಿಕ್ಕೋಡಿ – ಅಣ್ಣಸಾಹೇಬ್ ಶಂಕರ್ ಜೊಲ್ಲೆ ,
ಬಾಗಲಕೋಟೆ – ಪಿಸಿ ಗಡ್ಡಿಗೌಡರ್
ಬಿಜಾಪುರ – ರಮೇಶ್ ಜಿಗಿಜಿಣಗಿ ,
ಗುಲ್ಬರ್ಗ – ಉಮೇಶ್ ಜಾದವ್ ,
ಬೀದರ್ – ಭಗವತ್ ಖುಬಾ ,
ಕೊಪ್ಪಳ – ಬಸವರಾಜ್ ಕ್ಯಾವತೋರ್
ಬಳ್ಳಾರಿ – ಬಿ ಶ್ರೀರಾಮುಲು
ಹಾವೇರಿ – ಬಸವರಾಜ್ ಬೊಮ್ಮಾಯಿ
ಧಾರವಾಡ – ಪ್ರಹ್ಲಾದ್ ಜೋಶಿ
ದಾವಣಗೆರೆ – ಗಾಯತ್ರಿ ಸಿದ್ದೇಶ್ವರ
ಶಿವಮೊಗ್ಗ – ಬಿ ವೈ ರಾಘವೇಂದ್ರ
ಉಡುಪಿ ಚಿಕ್ಕಮಗಳೂರು – ಕೋಟಾ ಶ್ರೀನಿವಾಸ್ ಪೂಜಾರಿ
ದಕ್ಷಿಣ ಕನ್ನಡ – ಬ್ರಿಜೇಶ್ ಚೌಟಾ
ತುಮಕೂರು – ವಿ ಸೋಮಣ್ಣ
ಮೈಸೂರು – ಯದುವೀರ್ ಕೃಷ್ಣದತ್ತ ಒಡೆಯರ್
ಚಾಮರಾಜನಗರ – ಎಸ್ ಬಾಲರಾಜ್
ಬೆಂಗಳೂರು ಗ್ರಾಮಾಂತರ – ಡಾ ಸಿ.ಎನ್ ಮಂಜುನಾಥ್
ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
ಬೆಂಗಳೂರು ಸೆಂಟ್ರಲ್ – ಪಿಸಿ ಮೋಹನ್