ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿವಿ (ಕೆಎಸ್‌ಓಯು) ಕುಲಪತಿ ಪ್ರೊ.ಶರಣಪ್ಪ ಹಲಸೆ ಅವರ ಅಧಿಕಾರಾವಧಿ ಒಂದು ವರ್ಷ ವಿಸ್ತರಸಿ ರಾಜ್ಯಪಾಲ ಥಾವರ್ ಗೆಹ್ಲೋತ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯ ಅಧಿಕಾರ ಅವಧಿ ವಿಸ್ತರಿಸುವಂತೆ ಕೋರಿ ಪತ್ರ ಬರೆಯಲಾಗಿತ್ತು. ಹೀಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಾಯಿದೆ, ೧೯೯೨ ರ ಸೆಕ್ಷನ್ ೧೦ ರ ಮೂಲಕ ರಾಜ್ಯಪಾಲರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ ಅಧಿಕಾರ ಅವಧಿ ವಿಸ್ತರಿಸಿದ್ದಾರೆ.
ಇದನ್ನೂ ಓದಿ:-ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 60ನೇ ವಜ್ರಮಹೋತ್ಸವ : ಕೃಷಿ ಸಚಿವರ ಶ್ಲಾಘನೆ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಅವರ ಅಧಿಕಾರಾವಧಿ ನವೆಂಬರ್ ೧೧ರಂದು ಮುಕ್ತಾಯಗೊಳ್ಳಲಿತ್ತು. ಆದರೆ, ಈಗ ೨೦೨೬ರ ಜೂನ್ ೩೦ರವರೆಗೆ ಮುಂದುವರೆಯಲು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.




