ಬೆಂಗಳೂರು: ಕರ್ನಾಟಕದಲ್ಲಿರುವ ಜೈಲುಗಳು ಭಯೋತ್ಪಾದಕರಿಗೆ ಸ್ವರ್ಗವಿದ್ದಂತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣ ಖಂಡಿಸಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದು, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ: ಅಹಮದಾಬಾದ್| ಭಯೋತ್ಪಾದಕ ಸಂಚು ವಿಫಲ: ಮೂವರು ಶಂಕಿತರು ಅರೆಸ್ಟ್
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಕರ್ನಾಟಕದ ಕಾರಾಗೃಹವೆಂದರೆ ಭಯೋತ್ಪಾದಕರಿಗೆ ಸ್ವರ್ಗದಂತಾಗಿದೆ. ಜೈಲಿನ ಒಳಗೆ ಮೊಬೈಲ್, ಟಿವಿ, ಎಣ್ಣೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಲಾಗುತ್ತಿದೆ. ಕೈದಿಗಳಿಗೆ ರಾಜಾತಿಥ್ಯ ಒದಗಿಸುವಂತಹ ಕಾಂಗ್ರೆಸ್ ಸರ್ಕಾರ ನಮಗೆ ಬೇಡ. ಸಿಎಂ ಸಿದ್ದರಾಮಯ್ಯ ಮೊದಲು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಜೈಲಿನಲ್ಲಿ ರಾಜಾತಿಥ್ಯ ಒದಗಿಸುವುದೂ ನೀವೇ. ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿಸುವುದೂ ನೀವೇ. ಜೈಲಿನಲ್ಲಿ ಸರ್ಕಾರದ ಒಂದು ಸ್ಕೀಂ ನಡೆದಿದೆ. ಎರಡು ಗುಂಪುಗಳಿವೆ ಎಂದು ಗಂಭೀರ ಆರೋಪ ಮಾಡಿದರು.





