Mysore
25
broken clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ: ಸಚಿವ ಕೆ.ಎಚ್.ಮುನಿಯಪ್ಪ

Kಃ Muniyappa kharge

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ. ಹೋಟೆಲ್‌ನವರು ಒಂದು ವಾರ ಸಹಿಸಿಕೊಳ್ಳಲೇಬೇಕು ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಇಂದು ಕೂಡ ಆಯಿಲ್‌ ಕಂಪನಿ ಜೊತೆ ಮಾತುಕತೆ ನಡೆಸಿದ್ದೇನೆ. ಆಸ್ಪತ್ರೆ, ವಸತಿ ನಿಲಯಕ್ಕೂ ಕಮರ್ಷಿಯಲ್‌ ಗ್ಯಾಸ್‌ ಕೊಡುತ್ತೇವೆ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯಲಿದೆ. ಹೋಟೆಲ್‌ನವರಿಗೆ ಎಲೆಕ್ಟ್ರಿಕ್‌ ಸ್ಟೌವ್‌ ಮನವಿ ಮಾಡಿದ್ದೇವೆ ಎಂದರು.

ಹೋಟೆಲ್‌ನವರು ಒಂದು ವಾರ ಸಹಿಸಿಕೊಳ್ಳಬೇಕು. ವಾಣಿಜ್ಯ ಗ್ಯಾಸ್‌ ಒಂದು ವಾರ ಅಥವಾ 10 ದಿನ ಸಮಸ್ಯೆಯಾಗುತ್ತದೆ. ವಾಣಿಜ್ಯ ಸಿಲಿಂಡರ್‌ ಸ್ಟಾಕ್‌ ಇಲ್ಲ. ಆಟೋಗಳಿಗೆ ಗ್ಯಾಸ್‌ ಸಿಲಿಂಡರ್‌ ಕೊಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

Tags:
error: Content is protected !!