Mysore
28
scattered clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಮುಡಾ ಅಕ್ರಮಗಳ ʼಸಿದ್ದʼ ರೂವಾರಿ ರಾಮಯ್ಯ: ಜೆಡಿಎಸ್‌ ಕಿಡಿ

ಬೆಂಗಳೂರು: ಮುಡಾ ಅಕ್ರಮಗಳ ಸುಳ್ಳುಗಳ ಸರದಾರ ʼಸಿದ್ದʼ ರೂವಾರಿ ಭ್ರಷ್ಟಾರಾಮಯ್ಯನ ಕಪ್ಪು ಚುಕ್ಕೆಗಳು ನೂರಾರಿವೆ ಎಂದು ಜೆಡಿಎಸ್‌ ಕಿಡಿಕಾರಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ನಾನು ನಾನು ಎಂದು ಮೆರೆಯುತ್ತಿರುವ ಮುಡಾರಾಮಯ್ಯ ಪ್ರಭಾವಬೀರಿಯೇ ಪತ್ನಿಗೆ 14 ಸೈಟು ಮಂಜೂರು ಮಾಡಿಸಿದ್ದಾರೆ. ಅಲ್ಲದೇ ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ಸೈಟುಗಳ ಹಂಚಿಕೆಯಲ್ಲಿ ಅಕ್ರಮಗಳ ಸರಮಾಲೆಯೇ ನಡೆದಿದೆ. ಜೊತೆಗೆ ಸುಮಾರು 700 ಕೋಟಿ ರೂಪಾಯಿಯ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಬಹುಕೋಟಿ ಮುಡಾ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ED) ಹಲವು ಸ್ಫೋಟಕ ಮಾಹಿತಿಯನ್ನು ಹೆಕ್ಕಿ ಹೊರ ತೆಗೆದಿದೆ. ಇ.ಡಿ ತನಿಖೆ ಮತ್ತು ಕಾನೂನಿನ ಸುರುಳಿ ಬಿಗಿಯಾಗುತ್ತಿದ್ದಂತೆ ಭ್ರಷ್ಟರಾಮಯ್ಯ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಸಮಾವೇಶದ ನೆಪದಲ್ಲಿ ನಾಟಕ ಮಾಡಲು ಹೊರಟಿದ್ದಾರೆ. ಹೀಗಾಗಿ ಭ್ರಷ್ಟಾಚಾರದ ಪಿತಾಮಹರಾಗಿರುವ ಸಿದ್ದರಾಮಯ್ಯರವರ ತೆರೆಯದ ಪುಸ್ತಕದಲ್ಲಿ ಮತ್ತೆಷ್ಟು ಉಳುಕುಗಳಿವೆಯೋ ? ಎಂದು ವ್ಯಂಗ್ಯವಾಡಿದೆ.

Tags: