Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಜೆಡಿಎಸ್‌ ಎಂಲ್‌ಸಿ ಟಿ.ಎ.ಶರವಣ ಹೇಳಿಕೆ ಪ್ರಿಯಾಂಕ್‌ ಖರ್ಗೆ ಕಿಡಿ

ಬೆಂಗಳೂರು: ಜೆಡಿಎಸ್‌ ಎಂಎಲ್‌ಸಿ ಟಿ.ಎ ಶರವಣ ಅವರು, ಸಚಿವ ಪ್ರಿಯಾಂಕ್‌ ಖರ್ಗೆ ಹಾಲು ಕುಡಿದಷ್ಟು ನಾವು ನೀರು ಕುಡಿದಿಲ್ಲ ಎಂದು ಹೇಳಿದ್ದರು. ಇದೀಗ ಈ ಹೇಳಿಕೆ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

ವಿಧಾನಪರಿಷತ್‌ ಅಧಿವೇಶನದಲ್ಲಿ ಇಂದು(ಮಾರ್ಚ್‌.14) ಟಿ.ಎ.ಶರವಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಹಾಲಾದರೂ ಕುಡಿಯತ್ತೇವೆ ಅಥವಾ ನೀರಾದರೂ ಕುಡಿಯುತ್ತೇವೆ. ಇವರಿಗೆ ಏನು ಆಗಬೇಕು? ಈ ವಿಚಾರವೆಲ್ಲಾ ಯಾಕೆ ಬೇಕು? ಮೇಲ್ಮನೆಯಲ್ಲೂ ಇದೇ ಕೆಳಮನೆಯಲ್ಲೂ ಇದೆ ಎಂದು ಅಸಮಾಧಾನ ವ್ಯಕ್ತಪಡಸಿದ್ದಾರೆ.

ನಮ್ಮ ಮಾತ್ರ ಯಾಕೆ ಈ ಅಸಹನೆ, ನನಗೆ ಯಾರ ಕ್ಷಮೆಯೂ ಬೇಕಾಗಿಲ್ಲ. ನಾನೇನು ಯಾರ ಕರುಣೆಯ ಮೇಲೆ ಅಥವಾ ಯಾರದ್ದೋ ಭಿಕ್ಷೆಯಿಂದ ವಿಧಾನಸೌಧಕ್ಕೆ ಬಂದಿಲ್ಲ. ಅರ್ಹತೆಯಿಂದಲೇ ಬಂದಿದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಿಯಾಂಕ್‌ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಬಗ್ಗೆ ನಾನು ಒಳ್ಳೇ ಮನಸ್ಸಿನಿಂದ ಹೇಳಿದ್ದೇನೆ. ಆದರೆ ಅವರು ಅಪಾರ್ಥ ಮಾಡಿಕೊಂಡರೆ ಏನು ಮಾಡಲು ಆಗುವುದಿಲ್ಲ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

Tags:
error: Content is protected !!