ಮತ್ತೆ ಜೈಲುಪಾಲಾದ ನಟ ದರ್ಶನ್:‌ ದಾಸನ ಆಪ್ತ ಸಚಿವ ಜಮೀರ್‌ ಹೇಳಿದ್ದೇನು?

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ 13 ವರ್ಷಗಳ ಬಳಿಕ ಮತ್ತೆ ಜೈಲಪಾಲಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಇಂದು(ಜೂ.22) ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ ಬಗ್ಗೆ ಸರ್ಕಾರ ಮೃದು ಧೋರಣೆ ತಳೆದಿಲ್ಲ. ಅದರಲ್ಲೂ ವಿಶೇಷವಾಗಿ ನಾನು ದರ್ಶನ್‌ರನ್ನು ಸಮರ್ಥಿಸಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಕಾಣಿಸಿದೆ. ಆದರೆ ಇವೆಲ್ಲಾ ಸತ್ಯಕ್ಕೆ ದೂರ ಎಂದು ಸಚಿವರು ಹೇಳಿದರು.

ನನ್ನ ಮತ್ತು ದರ್ಶನ್‌ ನಡುವೆ ಸ್ನೇಹವಿರೋದು ಸತ್ಯ, ಆದರೆ ಇಂಥ ಕೆಲಸಗಳನ್ನು ಮಾಡಿದರೆ ಯಾರಾದರೂ ಜೊತೆಯಾಗಿ ನಿಂತುಕೊಳ್ಳುತ್ತಾರೆಯೇ? ಯಾರೇ ತಪ್ಪು ಮಾಡಿದ್ದರು ತಪ್ಪೇ, ಉಪ್ಪಿ ತಿಂದವ್ರು ನೀರು ಕುಡಿಯಬೇಕು ಎಂದರು.