Mysore
21
broken clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಐತಿಹಾಸಿಕ ಸಾಧನೆ ಮಾಡಿದ ಇಸ್ರೋ: ಡಾಕಿಂಗ್‌ ಸಾಹಸ ಯಶಸ್ವಿ

ಬೆಂಗಳೂರು: ಸ್ಪೇಸ್‌ ಡಾಕಿಂಗ್‌ ಪ್ರಯೋಗದ ಭಾಗವಾಗಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆಯನ್ನು ಇಸ್ರೋ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈ ಮೂಲಕ ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್‌ ಮತ್ತು ಅನ್‌ ಡಾಕಿಂಗ್‌ ಪ್ರಯೋಗ ಯಶಸ್ವಿಯಾಗಿದ್ದು, ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಎರಡು ಉಪಗ್ರಹಗಳನ್ನು ಜೋಡಿಸುವ ಹಾಗೂ ಬೇರ್ಪಡಿಸುವ ಪ್ರಯೋಗದಲ್ಲಿ ಇಲ್ಲಿಯವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿತ್ತು.

ಈ ಬಗ್ಗೆ ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ಡಾಕ್‌ ಮಾಡಿದೆ. ಭಾರತದ ಇಸ್ರೋದಿಂದ ನಡೆಸಲಾದ ಸ್ಪೇಡೆಕ್ಸ್‌ ಮಿಷನ್‌ ಯಶಸ್ಸು ಸಾಧಿಸಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಪಡುತ್ತೇವೆ ಎಂದು ಹೇಳಿದೆ.

ಭಾರತವು ಯಶಸ್ವಿ ಬಾಹ್ಯಾಕಾಶ ಡಾಕಿಂಗ್‌ ಸಾಧಿಸಿದ 4ನೇ ರಾಷ್ಟ್ರವಾಗಿದೆ ಎಂದು ಬರೆಯಲಾಗಿದೆ.

ಜೋಡಣೆ ಬಳಿಕ ಸಿಗ್ನಲ್‌ ಮೂಲಕ ಉಪಗ್ರಹಗಳ ನಿಯಂತ್ರಣ ಯಶಸ್ವಿಯಾಗಿದೆ. ಅನ್‌ಡಾಕಿಂಗ್‌ ಮತ್ತು ವಿದ್ಯುತ್‌ ಸರಬರಾಜು ಪರೀಕ್ಷೆಗಳನ್ನು ಮುಂಬರುವ ದಿನಗಳಲ್ಲಿ ನಡೆಸಲಾಗುವುದು ಎಂದು ಇಸ್ರೋ ಹೇಳಿದೆ.

ಜನವರಿ.12ರಂದು ಇಸ್ರೋ ಎರಡು ಬಾಹ್ಯಾಕಾಶ ನೌಕೆಗಳನ್ನು ಮೂರು ಮೀಟರ್‌ ಸಮೀಪಕ್ಕೆ ತಂದು ಡಾಕಿಂಗ್‌ಗೂ ಮುನ್ನ ಪ್ರಾಯೋಗಿಕ ಪ್ರಯತ್ನವನ್ನು ನಡೆಸಿತ್ತು. ಬಳಿಕ ಎರಡೂ ಉಪಗ್ರಹಗಳನ್ನು ಹಿಂದಕ್ಕೆ ಸರಿಸಿ ಸುರಕ್ಷಿತವಾಗಿ ನೆಲೆಗೊಳಿಸಿತ್ತು.

ಇನ್ನು 2024ರ ಡಿಸೆಂಬರ್‌.30ರಂದು ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗವನ್ನು ಇಸ್ರೋ ಯಶಸ್ವಿಯಾಗಿ ಆರಂಭಿಸಿತ್ತು.

 

Tags:
error: Content is protected !!