Mysore
24
clear sky

Social Media

ಶನಿವಾರ, 18 ಏಪ್ರಿಲ 2026
Light
Dark

ಟರ್ಕಿ ಶಾಲೆಯಲ್ಲಿ ಗುಂಡಿನ ದಾಳಿ ; ಪೊಲೀಸ್‌ ಅಧಿಕಾರಿ ಮಗನಿಂದ ನರಮೇಧ!

ಟರ್ಕಿ : ಟರ್ಕಿಯ ಕಹ್ರಮನ್ಮರಾಸ್ ಪ್ರಾಂತ್ಯದ ಶಾಲೆಯಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಂದೆಯ (ಮಾಜಿ ಪೊಲೀಸ್ ಅಧಿಕಾರಿ) ಬಂದೂಕನ್ನು ಬಳಸಿ ಗುಂಡು ಹಾರಿಸಿ 8 ವಿದ್ಯಾರ್ಥಿಗಳನ್ನು ಕೊಂದು, 10 ಮಂದಿಗೆ ಗಾಯಗೊಳಿಸಿದ ಘಟನೆ ನಡೆದಿದೆ. ಈ ಪ್ರಕರಣ ಟರ್ಕಿಯ ಜನರನ್ನು ಬೆಚ್ಚಿ ಬೀಳಿಸಿದೆ.

ಗುಂಡಿನ ದಾಳಿಯ ಪರಿಣಾಮ, 8 ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗುಂಡು ಹಾರಿಸಿದ ಬಳಿಕ ವಿದ್ಯಾರ್ಥಿ ತಾನೂ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಹ್ರಮನ್ಮರಸ್‌ ಪೊಲೀಸರು ತಿಳಿಸಿದ್ದಾರೆ.

ಹಂತಕ ವಿದ್ಯಾರ್ಥಿ 5 ಗನ್‌ ಹಾಗೂ 7 ಮ್ಯಾಗಜಿನ್‌ಗಳೊಂದಿಗೆ ದಾಳಿ ನಡೆಸಿದ್ದು, ದಾಳಿಗೆ ಕಂಗೆಟ್ಟ ವಿದ್ಯಾರ್ಥಿಗಳು ಶಾಲೆಯ ಕ್ಯಾಂಪಸ್‌ ತುಂಬ ಓಡಾಡಿದ್ದಾರೆ. ಇನ್ನೂ ಕೆಲವರೂ ಕ್ಲಾಸ್‌ರೊಂಗಳ ಕಿಟಕಿಗಳಿಂದ ಜಿಗಿದಿದ್ದಾರೆ. ಈ ಘಟನೆಯ ವಿಡಿಯೊಗಳು ಆತಂಕ ಸೃಷ್ಟಿಸಿವೆ.

ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದರಾದರೂ ಹಂತಕ ವಿದ್ಯಾರ್ಥಿಯನ್ನು ಜೀವಂತ ಹಿಡಿಯಲು ಆಗಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:
error: Content is protected !!