Mysore
21
overcast clouds

Social Media

ಸೋಮವಾರ, 14 ಜುಲೈ 2025
Light
Dark

ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ದೇಶಕ್ಕೆ ಲಾಭವಾಗುತ್ತಿದೆಯೇ.? ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಬಡವರ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಪಂಚ ಗ್ಯಾರಂಟಿಯಿಂದ ಆರ್ಥಿಕ ದಿವಾಳಿಯಾಗುತ್ತಿದೆ ಎಂದು ಹೇಳುವ ಪ್ರಧಾನಿ ಮೋದಿಯವರಿಗೆ ದೇಶದ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡುವುದರಿಂದ ದೇಶ್ಕೆಕ ಲಾಭವಾಗುತ್ತಿದ್ದೆಯೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಬಗ್ಗೆ ತನ್ನ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಶ್ರೀಮಂತ ಉದ್ಯಮಿಗಳ 20 ಲಕ್ಷ ಕೋಟಿ ಸಾಲವನ್ನು ರೈಟಾಫ್ ಮಾಡಿದರೆ ದೇಶದ ಪ್ರಗತಿಗೆ ಮಾರಕ ಆಗಲಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದೆ.

ಶ್ರೀಮಂತ ಉದ್ಯಮಿಗಳ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ದೇಶದ ಬೊಕ್ಕಸಕ್ಕೆ ವಾರ್ಷಿಕ 1.5 ಲಕ್ಷ ಕೋಟಿ ನಷ್ಟವಾಗುತ್ತಿರುವುದು ದೇಶದ ಪ್ರಗತಿಗೆ ಮಾರಕವಲ್ಲವೇ? ಮಾಲ್ಡಿವ್ಸ್, ಅಪಘಾನಿಸ್ತಾನ್, ಭೂತಾನ್ ಸೇರಿದಂತೆ ವಿದೇಶಗಳಿಗೆ ಸಾವಿರಾರು ಕೋಟಿ ಹಣ ನೀಡಿದರೆ ದೇಶದ ಪ್ರಗತಿಗೆ ಮಾರಕವಲ್ಲವೇ? ಪ್ರಧಾನಿ ಓಡಾಟಕ್ಕೆ 8 ಸಾವಿರ ಕೋಟಿ ಕೊಟ್ಟು ವಿಮಾನ ಖರೀದಿಸಿದರೆ ಪ್ರಗತಿಗೆ ಮಾರಕವಲ್ಲವೇ? ಎಂದು ಕಿಡಿಕಾರಿದೆ.

ಅಂದಾಜು 5000 ಕೋಟಿ ವೆಚ್ಚದ ಉಚಿತ ಪ್ರಯಾಣದ ಯೋಜನೆಯ ಬಗ್ಗೆ ಇಷ್ಟು ಅಸಹನೆ ಹೊಂದಿರುವ ಮೋದಿಯವರ ಜನವಿರೋಧಿ ನಿಲುವು ಜನತೆಗೆ ಅರ್ಥವಾಗಿದೆ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ.

Tags:
error: Content is protected !!