Mysore
24
mist

Social Media

ಸೋಮವಾರ, 17 ನವೆಂಬರ್ 2025
Light
Dark

ಸಿಎಂ ಸಿದ್ದರಾಮಯ್ಯ ರಾಜೀನಾಮೆಯನ್ನು ನಾನು ಕೇಳಿಲ್ಲ, ನನ್ನನ್ನು ಅರೆಸ್ಟ್‌ ಮಾಡಲಿ: ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ರಾಜೀನಾಮೆ ಕೇಳಿದ್ದೇನೆ ಹೊರತು, ಎಫ್‌ಐಆರ್‌ ದಾಖಲಾದ ಕಾರಣವಾಗಿ ರಾಜೀನಾಮೆ ಕೇಳಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಪರ ಜಿ.ಟಿ.ದೇವೇಗೌಡ ಬ್ಯಾಟಿಂಗ್‌ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿರುವುದಕ್ಕೆ ರಾಜೀನಾಮೆ ಕೇಳಿಲ್ಲ. ಅಧಿಕಾರಿಗಳ ಮೂಲಕ ಸಾಕ್ಷಿಗಳನ್ನು ಪರಿಪೂರ್ಣವಾಗಿ ನಾಶ ಮಾಡುವ ವಾತಾವರಣ ನಿರ್ಮಿಸಿಕೊಂಡಿದ್ದಾರೆ. ಈ ಸಲುವಾಗಿ ರಾಜೀನಾಮೆ ನೀಡಿ ಎಂದು ಕೇಳಿದ್ದೇನೆ ಅಷ್ಟೇ. ಎಫ್‌ಐಆರ್‌ ನನ್ನ ವಿರುದ್ಧವೂ ಇದೆ. ನಾನೂ ಏನಾದರೂ ಹಣ ತೆಗೆದುಕೊಂಡಿದ್ದೇನಾ ಅಥವಾ ಸರ್ಕಾರದಿಂದ ಅನುಕೂಲ ಮಾಡಿಕೊಂಡಿದ್ದೇನಾ? ನಾನು ರಾಜ್ಯದ ಅಭಿವೃದ್ಧಿಗಾಗಿ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡಿದ್ದೇನೆ ಅಷ್ಟೇ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಮಾವಿನಕಾಯಿಗೆ ಬೇವಿನ ಕಾಯಿ ಸಾಕ್ಷಿ ಎಂಬಂತೆ ಇದನ್ನು ಇಟ್ಟುಕೊಂಡು ರಕ್ಷಣೆ ಪಡೆದುಕೊಳ್ಳುವುದು ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರಲ್ಲ. ನನ್ನ ವಿರುದ್ಧದ ದೂರು ವಾಸ್ತವಾಂಶಕ್ಕೆ ಹತ್ತಿರವಾಗಿದೆ ಎಂದು ಹೇಳುತ್ತಾರ? ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಭಾಷಣದ ಸಮಯದಲ್ಲಿ ಸುಳ್ಳು ವರದಿಗಳಿಗೆ ಪ್ರಾಮುಖ್ಯತೆ ನೀಡಬಾರದು ಎಂದು ಹೇಳಿದ್ದಾರೆ. ಹಾಗಾಗಿ ಏನಾದರೂ ಹುಡುಕುವುದಾದರೆ ಕಷ್ಟವಾಗಿರುವುದನ್ನು ಹುಡುಕಿ. ಇಲ್ಲವಾದರೆ ಎಫ್‌ಐಆರ್‌ ಮಾಡಲು ಯಾರ ಯಾರ ಮೇಲೆ ಒತ್ತಡ ಹೇರಿದ್ದರೂ ಎಂಬು ತಿಳಿದಿದೆ. ಈ ಷಡ್ಯಂತ್ರದಿಂದ ನನ್ನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ನಾನು ರಾಜೀನಾಮೆ ನೀಡಿ ಎಂದು ಸಿದ್ದರಾಮಯ್ಯ ಹತ್ತಿರ ಕೇಳಿಲ್ಲ. ಅವರು ನಡೆದುಕೊಳ್ಳುತ್ತಿರುವ ಬಗೆಗೆ ಕೇಳಿದ್ದೇನೆ ಅಷ್ಟೇ ವಾಗ್ದಾಳಿ ನಡೆಸಿದರು.

Tags:
error: Content is protected !!