Mysore
22
moderate rain

Social Media

ಶನಿವಾರ, 30 ಮೇ 2026
Light
Dark

ದರ್ಶನ್‌ ಅರೆಸ್ಟ್‌ ಬಗ್ಗೆ ನನಗೆ ಗೊತ್ತಿಲ್ಲ : ಡಿಕೆಶಿ

ಬೆಂಗಳೂರು : ನಟ ದರ್ಶನ್‌ ಅರೆಸ್ಟ್‌ ಅಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿರುವ ಗ್ಗೆ ನನಗೆ ತಿಳಿದು ಬಂದಿಲ್ಲ ಎಂದಿದ್ದಾರೆ.

ನಾನು ಬೆಳಗ್ಗಿನಿಂದ ಟಿವಿ ನೋಡಿಲ್ಲ, ಈ ಬಗ್ಗೆ ಯಾವುದೇ ರೀತಿಯ ಮಾಹಿತಿ ನನ ಬಳಿ ಇಲ್ಲ. ಒಂದು ವೇಳೆ ತಪ್ಪು ಆಡಿದ್ದರೆ, ಕಾನೂನು ಎಲ್ಲರಿಗೂ ಒಂದೆ ಎಂದಿದ್ದಾರೆ.  ಅಷ್ಟೇ ಅಲ್ಲದೇ ಈ ವಿಚಾರದ ಬಗ್ಗೆ ಮಾತನಾಡಲು ಗೃಹ ಸಚಿವರಿದ್ದಾರೆ. ಅವರು ಈ ಬಗ್ಗೆ ಎಲ್ಲವನ್ನು ಮಾತನಾಡುತ್ತಾರೆ ಎಂದು ಹೇಳಿದರು.

Tags:
error: Content is protected !!