ಬಳ್ಳಾರಿ: ನಾನು ಸಿಬಿಐ ಕೇಸ್‌ಗಳನ್ನೇ ನೋಡಿದ್ದೇನೆ, ಯಾವ ದೂರಿಗೂ ಜಗ್ಗೋದು ಇಲ್ಲ, ಬಗ್ಗೋದು ಇಲ್ಲ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಶ್ರೀರಾಮುಲು ಹಾಗೂ ಶಾಸಕ ಜನಾರ್ಧನ ರೆಡ್ಡಿ ನಡುವೆ ಅಸಮಾಧಾನ ಭುಗಿಲೆದ್ದಿದ್ದು, ಬೆಂಬಲಿಗರ ನಡುವೆಯೂ ಕೂಡ ಕಿತ್ತಾಟ ಶುರುವಾಗಿದೆ.
ಈ ಕಿತ್ತಾಟದ ನಡುವೆಯೇ ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಶ್ರೀರಾಮುಲು ಬೆಂಬಲಿಗರು ಎಸ್‌ಪಿಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ ಅವರು, ನಾನು ಇಲ್ಲಿಯವರೆಗೂ ಅನೇಕ ಸಿಬಿಐ ಕೇಸ್‌ಗಳನ್ನು ನೋಡಿದ್ದೇನೆ. ಯಾವುದೇ ವಿಷಯ ಕೂಡ ರಹಸ್ಯವಾಗಿರಲ್ಲ. ವರಿಷ್ಠರ ಮುಂದೆ ಚರ್ಚೆ ಮಾಡುತ್ತೇನೆ. ನಾನು ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ. ವರಿಷ್ಠರು ಸೂಚನೆ ಕೊಟ್ಟಿದ್ದಾರೆ ಎಂದರು.