ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ 3 ವರ್ಷ ಜೈಲು, 1ಲಕ್ಷ ರೂ.ವರೆಗೆ ದಂಡ ವಿಧಿಸಲು ಕರುಡು ಬಿಲ್ ಸಿದ್ಧವಾಗಿದ್ದು, ಗುರುವಾರ(ಜ.30) ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ವಿಚಾರವಾಗಿ ಕ್ಯಾಬಿನೆಟ್ ಅಜೆಂಡಾದಲ್ಲಿ ಸುಗ್ರೀವಾಜ್ಞೆ ವಿಷಯ ಸೇರ್ಪಡೆ ಮಾಡಿದ್ದು, ಕಾನೂನು ಇಲಾಖೆಯಿಂದ ಕರ್ನಾಟಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಹಾಗೂ ಲೇವಾದೇವಿ ನಿಯಂತ್ರಣ 2025ರ ಕರಡು ಬಿಲ್ ಸಿದ್ಧಪಡಿಸಿಕೊಂಡಿದೆ. ಅಲ್ಲದೇ ಈ ಬಿಲ್ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಮೊದಲ ಆದ್ಯತೆ ನೀಡಿ, ಸುಗ್ರೀವಾಜ್ಞೆ ಕೈಗೆತ್ತಿಕೊಳ್ಳಲು ನಿರ್ಧಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾರ್ವಜನಿಕರಿಗೆ ಕಿರುಕುಳ ನೀಡಿದರೆ ಅಂತಹ ಕಂಪೆನಿಗಳ ವಿರುದ್ಧ 3 ವರ್ಷ ಜೈಲು, 1ಲಕ್ಷ ರೂ.ವರೆಗೆ ದಂಡ ವಿಧಿಸಲು ಕರುಡು ಬಿಲ್‌ನಲ್ಲಿ ಕಾನೂನು ರಚಿಸಲಾಗಿದೆ. ಅಲ್ಲದೇ ನೋಂದಣಿ ಪ್ರಾಧಿಕಾರದ ಮೂಲಕ ಮೈಕ್ರೋ ಫೈನಾನ್ಸ್‌ಗಳಿಗೆ ಕಡ್ಡಾಯ ನೋಂದಣಿ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಜೊತೆಗೆ ಆರ್‌ಬಿಐ ನಿಯಮಗಳ ಅನ್ವಯ ಸಾಲಮಿತಿ, ಬಡ್ಡಿ ಮಿತಿಗಳನ್ನ ಪಾಲಿಸಬೇಕೆಂಬ ಷರತ್ತು ಸುಗ್ರೀವಾಜ್ಞೆಯಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಾಲ ವಸೂಲಾತಿಗೂ ಕಠಿಣ ಷರತ್ತುಗಳನ್ನು ಹಾಕಲಾಗತ್ತಿದ್ದು, ಕಿರುಕುಳ ನೀಡಿದ ಫೈನಾನ್ಸ್ ಕಂಪೆನಿಗಳ ವಿರುದ್ಧ ಮುಲಾಜಿಲ್ಲದೇ ಈ ಕ್ರಮಗಳನ್ನು ಸುಗ್ರೀವಾಜ್ಞೆ ಮೂಲಕ ತರಲಾಗುತ್ತಿದೆ. ಹೀಗಾಗಿ ಜ.30, ಗುರುವಾರ ಸುಗ್ರೀವಾಜ್ಞೆ ಜಾರಿಗೊಳಿಸುತ್ತಿದ್ದು, ಕರಡು ಬಿಲ್ ಕುರಿತು ಚರ್ಚಿಸಿ ಆ ನಂತರ ಕೆಲ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.