ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಆಗಬೇಕು ಎಂಬುದನ್ನು ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರು ಅಭಿಪ್ರಾಯ ಹೊರಹಾಕಿದ್ದಾರೆ ಎಂದು ಹಿರಿಯ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಜೊತೆಜೊತೆಗೆ ಅಭಿವೃದ್ಧಿ ಕೆಲಸಗಳು ಕೂಡ ಆದರೆ ನಮಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಸಲಹೆ ನೀಡಲಾಗಿದೆ ಎಂದರು.ಉಚಿತ ಯೋಜನೆಗಳನ್ನ ಕೊಟ್ಟರೆ ಮಾತ್ರ ಗೆಲ್ಲುವುದಾಗಿದ್ದರೆ, ಜಗನ್ ಯಾಕೆ ಸೋತರು? . ಗ್ಯಾರೆಂಟಿಗಳನ್ನ ಪುನರ್ ಪರಿಶೀಲನೆ ಮಾಡಿ ಎಂದುತ ಹೇಳಿಲ್ಲ. ವಾಸ್ತವಾಂಶ ಏನಂದ್ರೆ ಬರೀ ಗ್ಯಾರೆಂಟಿಗಳಿಂದಲೇ ಗೆಲ್ಲೋಕಾಗಲ್ಲ. ಗ್ಯಾರೆಂಟಿಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತುಕೊಡಿ ಅಂತ ಶಾಸಕರು ಸಲಹೆ ಕೊಟ್ಟಿದ್ದಾರೆ ಎಂದಿದ್ದಾರೆ.
ಇದನ್ನು ಓದಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ: ಪ್ರತಿಪಕ್ಷ ನಾಯಕ ಆರ್.ಅಶೋಕ್
ಎಐಸಿಸಿ ಅಧ್ಯಕ್ಷರ ಸೂಚನೆಯಂತೆ ಯಾವ ಮಂತ್ರಿಗಳೂ, ಶಾಸಕರು ಸಿಎಂ ಬದಲಾವಣೆ ಬಗ್ಗೆ ಚರ್ಚೆಯೂ ಮಾಡಬಾರದು, ಪ್ರಸ್ತಾಪ ಕೂಡ ಮಾಡಬಾರದು ಎಂದು ಬಂದಿದೆ. ಹಾಗಾಗಿ ನಾಯಕತ್ವ ಬದಲಾವಣೆ ವಿಚಾರವಾಗಿ ಯಾವ ಪ್ರಸ್ತಾಪನೂ ಇಲ್ಲ, ಚರ್ಚೆಯೂ ಶಾಸಕಾಂಗ ಸಭೆಯಲ್ಲಿ ಆಗಿಲ್ಲ, ಅದರ ಪುನರುಚ್ಛಾರದ ಅಗತ್ಯವೂ ಇಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದಲೇ ಮತ್ತೆ ಗೆಲ್ಲಲು ಸಾಧಿಸಲು ಸಾಧ್ಯವಿಲ್ಲ ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಆಗಬೇಕು ಎಂಬುದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರು ಅಭಿಪ್ರಾಯ ಹೊರಹಾಕಿದ್ದಾರೆ. ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ ಅದಕ್ಕೆ ಎಲ್ಲಾ ಶಾಸಕರು ಧ್ವನಿಗೂಡಿಸಿದ್ದಾರೆ. ಫ್ರೀಬೀಸ್ ಜೊತೆ ಅಭಿವೃದ್ಧಿ ಕೆಲಸಗಳು ಆಗಬೇಕು ಎಂದ್ರು. ನಾಯಕತ್ವ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಯಾರೂ ಚರ್ಚೆ ಮಾಡಬಾರದು, ಪ್ರಸ್ತಾಪನೂ ಮಾಡಬಾರದು ಅಂತ ಹೇಳಿದ್ದಾರೆ. ನಿನ್ನೆಯ ಸಭೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ ಜನವರಿ ಒಂಭತ್ತರೊಳಗೆ ಡಿಕೆಶಿ ಸಿಎಂ ಎಂಬ ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಮಾತಾಡಿದ ರಾಜಣ್ಣ, ಅವನೇನು ಶಾಸ್ತ್ರಗೀಸ್ತ್ರ ಹೇಳ್ತಾನೇನೋ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾತಾಡಿದ ವಿರೋಧ ಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳನ್ನ ವಿರೋಧಿಸುತ್ತಿದ್ದಾರೆ. ನಿಮ್ಮ ಶಾಸಕರೇ ನಿಮ್ ಗ್ಯಾರಂಟಿ ಗಳು ನಮಗೆ ಬೇಡ ಅಭಿವೃದ್ಧಿಗೆ ಹಣ ಕೊಡಿ ಎಂದಿದ್ದಾರೆ. ನಾನು ನಿನ್ನೆ ಗ್ಯಾರಂಟಿ ಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಗಲಾಟೆ ಮಾಡಿದ್ರಿ. ಇವಾಗ ಖಜಾನೆ ಖಾಲಿ ಇಲ್ಲ, ತುಂಬಿದೆ ಅಲ್ಲವಾ.. ಎಂದು ಅಶೋಕ್, ಕಾಂಗ್ರೆಸ್‍ಗೆ ಟಾಂಗ್ ಕೊಟ್ಟಿದ್ದಾರೆ.





