Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಬ್ರಿಟೀಷರ ದಾಖಲೆಗಳನ್ನೇ ಸುಟ್ಟು ಹಾಕಿದ್ದ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್.ರೆಡ್ಡಿ ನಿಧನ

ತುಮಕೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಾವಗಡದ ವಿ.ಎನ್.ನರಸ ರೆಡ್ಡಿ ಅವರಿಂದು ನಿಧನರಾಗಿದ್ದಾರೆ. ಅವರಿಗೆ 103 ವರ್ಷಗಳಾಗಿತ್ತು.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ರೆಡ್ಡಿ ಅವರು ಬ್ರಿಟೀಷರ ಆಳ್ವಿಕೆಯ ದಾಖಲೆಗಳನ್ನು ನಾಶಪಡಿಸಲು ಇಲಿಗಳ ಬಾಲಕ್ಕೆ ಬಟ್ಟೆ ಸುತ್ತಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪಾವಗಡ ತಾಲ್ಲೂಕು ಕಛೇರಿಗೆ ಬಿಟ್ಟು ದಾಖಲೆಗಳನ್ನು ಸುಟ್ಟು ಹಾಕಿದ್ದರು.

ಇದನ್ನು ಓದಿ: ಬಾಲಿವುಡ್‌ ಹಿರಿಯ ನಟ ಸತೀಶ್‌ ಶಾ ನಿಧನ 

ಜೊತೆಗೆ ಬ್ರಿಟೀಷರ ಖಜಾನೆ ಲೂಟಿ ಮಾಡಲು ಸಂಚನ್ನು ಕೂಡ ರೂಪಿಸಿದ್ದರು. ಇದರಿಂದಾಗಿ ರಾತ್ರಿ ಮಲಗಿದ್ದ ವೇಳೆ ಪೊಲೀಸರು ವಿ.ಎನ್.ನರಸರೆಡ್ಡಿ ಸೇರಿದಂತೆ ಏಳು ಜನರನ್ನು ಬಂಧಿಸಿ ತುಮಕೂರು ಜೈಲಿಗೆ ಹಾಕಿದ್ದರು.

ರೆಡ್ಡಿ ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಮೃತರ ಸ್ವಗ್ರಾಮ ವೆಂಕಟಪುರ ಗ್ರಾಮದ ಸಮೀಪದ ತೋಟದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.

Tags:
error: Content is protected !!