Mysore
29
clear sky

Social Media

ಮಂಗಳವಾರ, 20 ಜನವರಿ 2026
Light
Dark

ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ 

ಬೆಂಗಳೂರು: ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 1.5 ಕೋಟಿ ರೂ ಮೌಲ್ಯದ 8 ಸಾವಿರ ಲೀಟರ್‌ ತುಪ್ಪವನ್ನು ಸೀಜ್‌ ಮಾಡಲಾಗಿದೆ.

ಈ ಸಂಬಂಧ ಕೆಎಂಎಫ್‌ ಡಿಸ್ಟ್ರಿಬ್ಯೂಟರ್‌ ಮಹೇಂದ್ರ, ಪುತ್ರ ದೀಪಕ್‌, ಸಪ್ಲೈರ್‌ಗಳಾದ ಮುನಿರಾಜು ಹಾಗೂ ಅಭಿ ಅರಸು ಎಂಬ ನಾಲ್ವರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬೆಂಗಳೂರಿನಲ್ಲಿದ್ದ ನಂದಿನಿ ಪಾರ್ಲರ್‌ಗಳಿಗೆ ನಕಲಿ ನಂದಿನಿ ತುಪ್ಪವನ್ನು ಸರಬರಾಜು ಮಾಡುತ್ತಿದ್ದರು. ಹೊರ ರಾಜ್ಯದಲ್ಲಿ ಕಲಬೆರಕೆ ತುಪ್ಪವನ್ನು ತಯಾರಿಸಿ, ಪ್ಯಾಕೆಜ್‌ ಹಾಗೂ ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ಸಪ್ಲೈ ಮಾಡುತ್ತಿದ್ದರು.

ಸದ್ಯ ಪೊಲೀಸರು ನಾಲ್ವರ ಮುಖವಾಡ ಕಳಚಿ ಅರೆಸ್ಟ್‌ ಮಾಡಿದ್ದು, ಬರೋಬ್ಬರಿ 1.50 ಕೋಟಿ ರೂ ಮೌಲ್ಯದ 8 ಸಾವಿರ ಲೀಟರ್‌ ನಕಲಿ ತುಪ್ಪವನ್ನು ಜಪ್ತಿ ಮಾಡಿದ್ದಾರೆ.

Tags:
error: Content is protected !!