ಬೆಂಗಳೂರು : ಚಿಕ್ಕವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಫಿಟ್ನೆಸ್ ತರಬೇತುದಾರರಾಗಿದ್ದ ಹಾಗೂ ಖ್ಯಾತ ಸೈಕ್ಲಿಸ್ಟ್ ಆಗಿದ್ದ ಅನಿಲ್ ಕಡ್ಸೂರ್ ಅವರು ಬೆಂಗಳೂರಿನಲ್ಲಿ ಹೃಯದಾಘಾತಕ್ಕೆ ಬಲಿಯಾಗಿದ್ದಾರೆ.
45 ವರ್ಷದ ಅನಿಲ್ ಕಡ್ಸೂರ್ ಅವರು ಬೆಳಗ್ಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅನಿಲ್ ಅವರು ಕಳೆದ 42 ತಿಂಗಳಿಂದ ಪ್ರತಿದಿನ 100 ಕಿಲೋ ಮೀಟರ್ ಸೈಕ್ಲಿಂಗ್ ಮಾಡುತ್ತಿದ್ದರು. ದೇಹದಂಡನೆ ಮೂಲಕ ಆರೋಗ್ಯವನ್ನ ಕಾಪಾಡಿಕೊಂಡು ಬಂದಿದ್ದ ಅನಿಲ್ ಅವರಿಗೂ ಹೃದಯಾಘಾತವಾಗಿದೆ.