Mysore
21
broken clouds

Social Media

ಶನಿವಾರ, 10 ಅಕ್ಟೋಬರ್ 2026
Light
Dark

ಎಡ್‌ ಶೀರನ್‌ ಕಾರ್ಯಕ್ರಮ; ಯಾರೊಬ್ಬರೂ ಪರಿಸ್ಥಿತಿ ಲಾಭ ಪಡೆಯಬಾರದು: ಜಿ. ಪರಮೇಶ್ವರ್‌

ಬೆಂಗಳೂರು: ಪಾಪ್‌ ಗಾಯಕ ಎಡ್‌ ಶೀರನ್‌ ಅವರ ಗಾಯನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಾರೊಬ್ಬರೂ ಪರಿಸ್ಥಿತಿಯ ಲಾಭ ಪಡೆಯಬಾರದು ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ.

ಇಂದು (ಫೆ.10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಮಂದಿ ಪ್ರಸಿದ್ದ ಗಾಯಕರಿದ್ದಾರೆ. ಸ್ಟ್ರೀಟ್‌ನಲ್ಲಿ ಹಾಡುವ ಮೂಲಕ ಯಾರೊಬ್ಬರು ಪರಿಸ್ಥಿತಿಯ ಲಾಭ ಪಡೆಯಬಾರದು ಎಂದು ಹೇಳಿದರು.

ಇಂಗ್ಲೆಂಡ್‌ನ ಪಾಪ್‌ ಗಾಯಕ ಎಡ್‌ ಶೀರನ್‌ ಅವರಿಗೆ ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಇದ್ದಕಿದ್ದಂತೆ ಚರ್ಚ್‌ ಸ್ಟ್ರೀಟ್‌ನಲ್ಲಿ ಬಂದು ಹಾಡಲು ಪ್ರಾರಂಭಿಸಿದ್ದಾರೆ. ಆದ ಕಾರಣ ಪೊಲೀಸರು ತಡೆದಿದ್ದಾರೆ ಎಂದು ತಿಳಿಸಿದರು.

 

Tags:
error: Content is protected !!