ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ಶೇ2 % ರಷ್ಟು ತುಟ್ಟಿಭತ್ಯೆ( DA) ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ದೀಪಾವಳಿ ಹಬ್ಬದ ಬಂಪರ್ ಕೊಡುಗೆ ನೀಡಿದೆ.
ಬುಧವಾರ ಸಂಜೆ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ 2025 ಜುಲೈ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇ2:,ರಷ್ಟು ತುಟ್ಟಿ ಬತ್ತೆ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಮೂಲ ವೇತನ ಶೇಕಡ 12. 25 25 ರಿಂದ ಶೇಕಡ 14. 25ಕ್ಕೆ ಏರಿಕೆ ಮಾಡಲಾಗಿದೆ.
ಸರ್ಕಾರದ ಈ ಆದೇಶದಿಂದ ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ, 4.50 ಲಕ್ಷ ನಿವೃತ್ತ ನೌಕರರಿಗೆ ಇದು ಅನ್ವಯವಾಗಲಿದೆ. ಕಳೆದ ವರ್ಷ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಜಾರಿ ಮಾಡಲಾಗಿತ್ತು. ಸದ್ಯ ಈ ವರ್ಷ ಶೇಕಡಾ 1.50 ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿತ್ತು. ಹಾಲಿ ಜಾರಿಯಲ್ಲಿದ್ದ ಶೇಕಡಾ 10.75 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇಕಡಾ 12.25 ರಷ್ಟಕ್ಕೆ ಏರಿಕೆ ಮಾಡಲಾಗಿತ್ತು.
ಇದನ್ನೂ ಓದಿ:-ಪಾಕ್-ಅಫ್ಗಾನಿಸ್ತಾನ ಸಂಘರ್ಷ : ಕಂದಹಾರ್ ಮೇಲೆ ಪಾಕ್ ವೈಮಾನಿಕ ದಾಳಿ, ಸಾವಿನ ಶಂಕೆ
ಈ ಹಿಂದೆ ನವೆಂಬರ್‌ನಲ್ಲಿ ತುಟ್ಟಿಭತ್ಯೆಯನ್ನು ಕರ್ನಾಟಕ ಸರ್ಕಾರಿ ಏರಿಸಿತ್ತು. ಮೂಲವೇತನದ ಶೇ 8.50ರಷ್ಟು ತುಟ್ಟಿ ಭತ್ಯೆಯನ್ನು ಆರ್ಥಿಕ ಇಲಾಖೆಯ ಆದೇಶದ ಬಳಿಕ ಅದನ್ನು ಶೇ 10.75ಕ್ಕೆ ಹೆಚ್ಚಿಸಲಾಗಿತ್ತು. ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ ನೌಕರರಿಗೆ ಇದರ ಉಪಯೋಗ ದೊರೆತಿತ್ತು.
ಏನಿದು ತುಟ್ಟಿ ಭತ್ಯೆ?
ತುಟ್ಟಿ ಭತ್ಯೆ (DA) ಎಂಬುದು ಸರ್ಕಾರವು ಸಾರ್ವಜನಿಕ ವಲಯದ ಹಾಲಿ ಮತ್ತು ನಿವೃತ್ತ ಸದಸ್ಯರಿಗೆ ಒದಗಿಸುವ ಜೀವನ ವೆಚ್ಚ ಹೊಂದಾಣಿಕೆ ಭತ್ಯೆಯಾಗಿದೆ. ಸರ್ಕಾರಿ ನೌಕರರ ಮೂಲ ವೇತನದ ಶೇಕಡಾವಾರು ಪ್ರಮಾಣವನ್ನು ಬಳಸಿಕೊಂಡು ಇದನ್ನು ನಿರ್ಧರಿಸಲಾಗುತ್ತದೆ. ಡಿಎ ಜೀವನ ವೆಚ್ಚಕ್ಕೆ ನೇರವಾಗಿ ಸಂಬಂಧಿಸಿರುವುದರಿಂದ, ಡಿಎ ಅಂಶವು ವಿಭಿನ್ನ ಉದ್ಯೋಗಿಗಳಿಗೆ ಅವರ ಸ್ಥಳವನ್ನು ಆಧರಿಸಿ ವಿಭಿನ್ನವಾಗಿರುತ್ತದೆ. ಇದರರ್ಥ ನಗರ ವಲಯ, ಅರೆ-ನಗರ ವಲಯ ಅಥವಾ ಗ್ರಾಮೀಣ ವಲಯದ ಉದ್ಯೋಗಿಗಳಿಗೆ ಡಿಎ ವಿಭಿನ್ನವಾಗಿರುತ್ತದೆ. ಕಾಲಕಾಲಕ್ಕೆ ಇದನ್ನು ಪರಿಷ್ಕರಣೆ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಈ ಪರಿಷ್ಕರಣೆ ಈಗ ಮಾಡಲಾಗಿದೆ.





