ಬೆಂಗಳೂರು: ಹೈಕಮಾಂಡ್ ಹೇಳಿದ ಮೇಲೂ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಹೈಕಮಾಂಡ್ ನಾಯಕರು ಅದರ ಬಗ್ಗೆ ತೀರ್ಮಾನ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಹರಿಪ್ರಸಾದ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಶಾಸಕರು ಡಿಕೆಶಿ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಶಾಸಕರು ಹೇಳಿರುವ ಬಗ್ಗೆ ನಾನು ಕಮೆಂಟ್ ಮಾಡೋಕೆ ಆಗಲ್ಲ. ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ಎಲ್ಲರೂ ಫಾಲೋ ಮಾಡಬೇಕು. ಹೀಗಿದ್ದರೂ ಮಾತನಾಡುತ್ತಿದ್ದಾರೆ ಅಂದರೆ ಈ ಬಗ್ಗೆ ನಾಯಕರೇ ತೀರ್ಮಾನ ಮಾಡಬೇಕು ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಪಕ್ಷದ ಶಿಸ್ತು ಅನ್ನೋದು ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್ ಎಂದು ಬರಲ್ಲ. ಅಶಿಸ್ತು ಅಂದ್ರೆ ಅದು ಅಶಿಸ್ತೇ. ಯಾರೇ ಅಶಿಸ್ತು ತೋರಿಸಿದ್ರೆ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಆ ಸಮಿತಿ ಅವರು ಯಾವುದು ಶಿಸ್ತು, ಯಾವುದು ಅಶಿಸ್ತು ಎಂದು ತೀರ್ಮಾನ ಮಾಡಬೇಕು ಎಂದರು.