Mysore
23
overcast clouds

Social Media

ಗುರುವಾರ, 28 ಮೇ 2026
Light
Dark

ನಿರ್ದೇಶಕ ನಾಗಶೇಖರ್‌ ಕಾರು ಅಪಘಾತ: ಓರ್ವ ಮಹಿಳೆಗೆ ಗಾಯ

ಬೆಂಗಳೂರು: ಚಂದನವನದ ನಿರ್ದೇಶಕ ನಾಗಶೇಖರ್‌ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯವಾಗಿದೆ.

ನಾಗಶೇಖರ್‌ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಫುಟಪಾತ್‌ ಮೇಲೆ ಹರಿದು, ಮರಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ, ನಾಗಶೇಖರ್‌ ಕಾರಿನ ಮುಂಭಾಗ ಜಖಂಗೊಂಡಿದೆ.

ಅಪಘಾತದ ಬಳಿಕ ಮಹಿಳೆಯನ್ನ ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಬಿಟ್ಟು ನಾಗಶೇಖರ್‌ ತೆರಳಿದ್ದಾರೆ ಎನ್ನಲಾಗಿದೆ. ಜ್ಞಾನಭಾರತಿ ಸಂಚಾರಿ ಠಾಣೆ ಪೊಲೀಸರು ಭೇಟಿ ಪರಿಶೀಲಿಸಿ, ನಾಗಶೇಖರ್‌ ಅವರ ಕಾರನ್ನು ವಶಕ್ಕೆ ಪಡೆದಿದ್ದಾರೆ.

Tags:
error: Content is protected !!