Mysore
27
overcast clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಹಾಸನ| ಪಾಳು ಬಿದ್ದಿದ್ದ ಕಟ್ಟಡ ಕುಸಿತ: ಬೀದಿಬದಿ ವ್ಯಾಪಾರ ಮಾಡುತ್ತಿದ್ದ ನಾಲ್ವರು ಸಾವು

ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಪಾಳು ಬಿದ್ದಿದ್ದ ಕಟ್ಟಡ ಕುಸಿದು ಬಿದ್ದು ಮೂವರು ಮಹಿಳೆಯರು ಮತ್ತು ಓರ್ವ ಯುವಕ ಸಾವನ್ನಪ್ಪಿದ್ದಾರೆ.

ಈ ದುರಂತ ಇಂದು(ಮಾರ್ಚ್.9) ಬೇಲೂರು ನಗರದಲ್ಲಿ ನಡೆದಿದ್ದು, ಮೃತರಲ್ಲಿ ಇಬ್ಬರನ್ನು ಆಶಾ ಮತ್ತು ದೀಪು ಎಂದು ಗುರುತಿಸಲಾಗಿದೆ. ಆದರೆ ಇನ್ನುಳಿದ ಇಬ್ಬರು ಗುರುತು ಪತ್ತೆಯಾಗಿಲ್ಲ. ಅಲ್ಲದೇ ಕಟ್ಟದ ಬಿದ್ದ ಸ್ಥಳದಲ್ಲಿ ಹಲವರು ಸಿಲುಕಿಕೊಂಡರುವ ಶಂಕೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಾಳುಬಿದ್ದ ಕಟ್ಟಡ ಕುಸಿದು ಬಿದ್ದ ಹಿನ್ನೆಲೆಯಲ್ಲಿ ನಾಲ್ವರು ಬೀದಿ ವ್ಯಾಪಾರಿಗಳು ಸಾವನ್ನಪ್ಪಿದ್ದರೆ, ನಾಲ್ವರಿಗೆ ಗಂಭೀರ ಗಾಯವಾಗಿದೆ. ಈ ಗಾಯಾಳುಗಳನ್ನು ಅಂಬುಲೆನ್ಸ್‌ ಮೂಲಕ ಹಾಸನದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಘಟನೆ ನಡೆದ ಸ್ಥಳಕ್ಕೆ ಹಾಸನ ಜಿಲ್ಲಾ ಎಸ್‌ಪಿ ಮಹಮದ್‌ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:
error: Content is protected !!