Mysore
25
scattered clouds

Social Media

ಶನಿವಾರ, 16 ಮೇ 2026
Light
Dark

ಕಾಂಗ್ರೆಸ್‌ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಕುಸಿದು ಹೋಗಿವೆ: ನಿಖಿಲ್‌ ಕುಮಾರಸ್ವಾಮಿ

Nikhil kumaraswamy

ಬೆಂಗಳೂರು: ಬಿಬಿಎಂಪಿ ಹೆಸರು ಬದಲಿಸಿ ಜಿಬಿಎ ಮಾಡಿದ್ದೇ ಕಾಂಗ್ರೆಸ್‌ ಸರ್ಕಾರದ ಸಾಧನೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ ಅವರು, ಮೆಟ್ರೋ ಶಂಕು ಸ್ಥಾಪನೆ ಮಾಡಿದ್ದೇ ಎಚ್.ಡಿ.ಕುಮಾರಸ್ವಾಮಿ. ಬೆಂಗಳೂರು ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ. ಫ್ಲೈಓವರ್‌ ಕಾನ್ಸೆಪ್ಟ್‌ ತಂದಿದ್ದ ಎಚ್‌.ಡಿ.ದೇವೇಗೌಡರು, ಕಾವೇರಿ 4ನೇ ಹಂತದ ಯೋಜನೆ ತಂದಿದ್ದು ಸಹ ದೇವೇಗೌಡರು. ಎಚ್‌ಡಿಡಿ ಅವರು ಯಾರೂ ಅಳಿಸಲಾಗದಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಬಿಬಿಎಂಪಿ ರಚಿಸಿದರು. ಈಗ ಕಾಂಗ್ರೆಸ್‌ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳು ಕುಸಿದಿವೆ. ಬಿಬಿಎಂಪಿ ಬದಲಿಸಿ ಜಿಬಿಎ ಮಾಡಿದ್ದೇ ಇವರ ಸಾಧನೆ. ಜಿ ಎಂದರೆ ಗಾರ್ಬೇಜ್‌ ಬಿ ಎಂದರೇ ಬ್ಯಾಡ್‌ರೋಡ್‌ ಎ ಎಂದರೆ ಎ ಖಾತೆ ಸ್ಕ್ಯಾಮ್‌. ಇದು ಜಿಬಿಎ ಎಂದು ಟೀಕೆ ಮಾಡಿದರು.

 

Tags:
error: Content is protected !!