Mysore
30
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಮಾಜಿ ಸಚಿವ ಕೆ.ಎನ್‌ ರಾಜಣ್ಣ ಭೇಟಿ ಮಾಡಿದ ಡಿಸಿಎಂ

ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎನ್‌ ರಾಜಣ್ಣ ಅವರ ನಿವಾಸಕ್ಕೆ ತೆರಳಿದ ಡಿಕೆ ಅವರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ . ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸಂಘರ್ಷದ ಹಾದಿ ಬಿಟ್ಟು ಸಂಧಾನದ ಹಾದಿ ಹಿಡಿದಿದ್ದಾರೆ. ಹೀಗೆ ಉಭಯ ನಾಯಕರ ಭೇಟಿ ,  ಬಾರಿ ಕುತೂಹಲವನ್ನು ಮೂಡಿಸಿದೆ .

ಸುಮಾರು 10 ರಿಂದ 12 ನಿಮಿಷಗಲ ಕಾಲ ರಾಜಣ್ಣರವರೊಂದಿಗೆ ಚರ್ಚೆ ನಡೆಸಿ ದಿಕೆ ವಾಪಾಸ್ಸಾಗಿದ್ದಾರೆ . ಈ ಹಿಂದೆ ಚರ್ಚೆ ಮಾಡಲು ಬಂದಾಗ ಹಿಂ,ದೆ ಸರಿದ್ದರು , ಆದರೆ ಇದೀಗಾ ಬಾಲಬ್ರೂಯಿ ರಸ್ತೆಯಲ್ಲಿರುವ ರಾಜಣ್ಣರವರ ಅಪಾರ್ಟಮೆಂಟ್‌ನಲ್ಲಿ ಚರ್ಚೆಯನ್ನು ನಡೆಸಿದ್ದಾರೆ .

ಅಪೆಕ್ಸ್‌ ಬ್ಯಾಂಕ್‌ ವಿಚಾರವಾಗಿ ನಾಯಕರು ಚರ್ಚೆ ನಡೆಸಿದ್ದು , ತಮ್ಮ ಆಪ್ತ ಎಂಎಲ್ಸಿ ರವಿ ಅವರನ್ನು ಕಣಕ್ಕಿಳಿಯಲು ಡಿಕೆ ಪ್ಲಾನ್‌ ಮಾಡಿಕೊಂಡಿದ್ದಾರೆ . ಸಹಕಾರಿ ಕ್ಷೇತ್ರದಲ್ಲಿರಾಜಣ್ಣ ಮೂರು ದಶಕಗಲಿಂದ ಪ್ರಬಲ್ಯ ಹೊಂದಿದ್ದಾರೆ . ಈ ವಿಚಾರವಾಗಿ ರಾಜಣ್ಣರವರು ಡಿಕೆ ಶಿವಕುಮಾರ್‌ ಜೊತೆ ಚರ್ಚೆಯನ್ನು ನಡೆಸಿದ್ದಾರೆ ಎಂದು ಹೇಳಲಾಗಿದೆ .

Tags:
error: Content is protected !!