Mysore
25
haze

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಶಾಲಾ ಮಕ್ಕಳಿಗೆ ದಸರಾ ರಜೆ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಮಾರ್ಗಸೂಚಿ

ಬೆಂಗಳೂರು : ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಮುಂದಿನ ಒಂದು ವಾರದಲ್ಲಿಯೇ ದಸರಾ ರಜೆ ಆರಂಭವಾಗಲಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಒಟ್ಟು 18 ದಿನಗಳು ರಜೆ ಸಿಗಲಿದೆ.

ಈ ಬಗ್ಗೆ ಕರ್ನಾಟಕ ಶಿಕ್ಷಣ ಇಲಾಖೆಯು ಮಾಹಿತಿ ನೀಡಿದ್ದು, ಶೈಕ್ಷಣಿಕ ವರ್ಷ ಆರಂಭದಲ್ಲಿಯೇ ರಜೆ ಹಾಗೂ ಕಾರ್ಯ ಚಟುವಟಿಕೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ದಸರಾ ರಜೆಗೆ ಸೆ.20 ರಿಂದ ಆರಂಭವಾಗಿ ಅ.7ರವರೆಗೂ ಇರಲಿದೆ.

ಶಾಲೆಗಳ ದಸರಾ ರಜೆಗಳಲ್ಲಿಯೇ ದಸರಾ ಹಬ್ಬದ ರಜೆ, ಗಾಂಧಿ ಜಯಂತಿ ರಜೆ (ಅಕ್ಟೋಬರ್ 2) ಹಾಗೂ ಒಂದು ದಿನ ವಾಲ್ಮೀಕಿ ಜಯಂತಿಯ (ಅಕ್ಟೋಬರ್ 7) ರಜೆ ಸೇರಿರಲಿದೆ.

ಇದನ್ನು ಓದಿ: ಮೈಸೂರು ದಸರಾ | ದಸರಾ ಸಂಭ್ರಮದ ಜತೆಗೆ ಸುರಕ್ಷತೆಗೂ ನಿಗಾವಹಿಸಿ : ಸೆಸ್ಕ್‌ ಮನವಿ

ದಸರಾ ಹಾಗೂ ಗಾಂಧಿ ಜಯಂತಿ ಹಿಂದೆ ಮುಂದೆ
2025 ರಲ್ಲಿ ದಸರಾ ಹಾಗೂ ಗಾಂಧಿ ಜಯಂತಿ ರಜೆಗಳು ಸಾಲು ಸಾಲಾಗಿ ಬಂದಿವೆ. ಗಾಂಧಿ ಜಯಂತಿ ರಾಷ್ಟ್ರೀಯ ಹಬ್ಬದ ಕಾರಣ ಶಾಲೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕಾಗುತ್ತದೆ. ಆ ನಂತರ ವಾಲ್ಮೀಕಿ ಜಯಂತಿ ಅಕ್ಟೋಬರ್ ೭ ಕ್ಕೆ ಕೂಡ ಶಾಲೆಗಳಲ್ಲಿ ಕಾರ್ಯಕ್ರಮಗಳು ಇರಲಿವೆ. ಆ ದಿನ ಮಕ್ಕಳು ಶಾಲೆಗೆ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಶಾಲೆಗಳಲ್ಲಿ ಮನವಿ ಮಾಡಲಾಗುತ್ತದೆ.

ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗಳಿಗೆ ಎರಡು ಶನಿವಾರ, 4 ಭಾನುವಾರ ಸೇರಿದಂತೆ ಒಟ್ಟು 10 ದಿನಗಳು ರಜೆ ಇರುತ್ತದೆ.

ಅಕ್ಟೋಬರ್‌ನಲ್ಲಿ ಮತ್ತೆ 2 ದಿನಗಳು ರಜೆ
ಅಕ್ಟೋಬರ್ ತಿಂಗಳಿನಲ್ಲಿ ಮತ್ತೆ 2 ದಿನಗಳು ರಜೆ ಇರಲಿವೆ. ದೀಪಾವಳಿ ಸಂದರ್ಭದಲ್ಲಿ ಅಕ್ಟೋಬರ್ 20 ನರಕ ಚತುರ್ದಶಿ, ಅಕ್ಟೋಬರ್ 22 ಕ್ಕೆ ಬಲಿಪಾಡ್ಯಮಿಗೆ ಸಾರ್ವಜನಿಕ ರಜೆ ಇದೆ. ಕೆಲವೆಡೆ ಅಕ್ಟೋಬರ್ 21ಕ್ಕೆ ಸಾಂದರ್ಭಿಕ ರಜೆ ನೀಡಿ ಸತತ ಮೂರು ದಿನ ರಜೆ ಕೊಡಲಾಗುತ್ತದೆ.

Tags:
error: Content is protected !!