ಬೆಂಗಳೂರು: ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ನಾಡಬಂಧುಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು, ಕತ್ತಲಿನಿಂದ ಬೆಳಕಿನ ಹಾದಿ ತೋರುವ ಈ ಹಬ್ಬವು ಸಮಾಜವನ್ನು ಬಾಧಿಸುತ್ತಿರುವ ದ್ವೇಷ, ಹಿಂಸೆ, ಅಸತ್ಯ, ಅಶಾಂತಿ, ಬಡತನ, ಅಜ್ಞಾನಗಳ ಅಂಧಕಾರವನ್ನು ಸರಿಸಿ, ಸ್ನೇಹ, ಸಹಬಾಳ್ವೆ, ಸತ್ಯ, ನೆಮ್ಮದಿ, ಸುಜ್ಞಾನದ ಬೆಳಕನ್ನು ಎಲ್ಲೆಡೆ ಬೆಳಗಿಸಲಿ ಎಂದು ಹಾರೈಸುತ್ತೇನೆ. ಹಬ್ಬದ ಸಂಭ್ರಮದ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರಿ. ಹಸಿರು ಪಟಾಕಿಗಳನ್ನೇ ಬಳಸಿ. ಎಳೆಯ ಮಕ್ಕಳು ಪಟಾಕಿ ಸಿಡಿಸುವಅಗ ಹಿರಿಯರು ಅವರ ಬಗ್ಗೆ ಜಾಗ್ರತೆ ವಹಿಸಿ. ದೀಪಾವಳಿಯನ್ನು ಸಂಭ್ರಮದಿಂದಲೂ, ಸುರಕ್ಷಿತವಾಗಿಯೂ ಆಚರಿಸಿ ಎಂದು ವಿನಂತಿಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.





