Mysore
34
few clouds

Social Media

ಮಂಗಳವಾರ, 12 ಮೇ 2026
Light
Dark

ಟಿಕೆಟ್‌ ಪಡೆಯದೇ ಬಸ್‌ನಲ್ಲಿ ಪ್ರಯಾಣಿಸಿ ವಾಟಾಳ್‌ ನಾಗರಾಜ್‌ ವಿನೂತನ ಪ್ರತಿಭಟನೆ

ರಾಮನಗರ: ರಾಜ್ಯ ಸರ್ಕಾರ 4 ಸಾರಿಗೆ ನಿಗಮಗಳ ಬಸ್‌ ಪ್ರಯಾಣ ದರ ಹೆಚ್ಚಿಳ ಮಾಡಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ವಿನೂತನ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರಾಜ್ಯದ ಪುರುಷರ ಬಳಿ ಹಣ ವಸೂಲಿ ಮಾಡಿ ಸ್ತ್ರೀಯರಿಗೆ ಉಚಿತ ಕೊಡುವ ಮೂಲಕ ಹಗಲು ದರೋಡೆ ನಡೆಸುತ್ತಿದೆ. ಕೂಡಲೇ ಸರ್ಕಾರ ಟಿಕೆಟ್‌ ದರ ಏರಿಕೆಯನ್ನು ವಾಪಸ್‌ ಪಡೆಯಬೇಕು. ಇಲ್ಲ ಅಂದರೆ ಪುರುಷರಿಗೂ ಬಸ್‌ ಪ್ರಯಾಣ ಉಚಿತ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ರಾಮನಗರದ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ ಟಿಕೆಟ್‌ ಪಡೆಯದೇ ಪ್ರಯಾಣ ಮಾಡಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!