ಬೆಂಗಳೂರು: ಮೇ.13ಕ್ಕೆ ಬೆಂಗಳೂರು ಜನತೆಗೆ ಬಿಗ್ ಗಿಫ್ಟ್ ನೀಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲ ಅವರ ಜೊತೆ ರಾಜಕೀಯವಾಗಿ ಸಭೆ ಮಾಡಿದ್ದೇವೆ. ಈಗ ಅಧಿಕಾರಿಗಳನ್ನು ಕರೆದು ಸೂಚನೆ ಕೊಟ್ಟಿದ್ದೇವೆ. ಮೇ.13ರಂದು ಬೆಂಗಳೂರು ಜನರಿಗೆ ಒಂದು ದೊಡ್ಡ ಗ್ಯಾರಂಟಿ, ಬಿಗ್ ಗಿಫ್ಟ್ ಕೊಡಲಿದ್ದೇವೆ. ಅದನ್ನು ಮೇ.13ರಂದೇ ತಿಳಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮೊದಲು ನಮ್ಮಿಂದ ಶುರು ಮಾಡಿಸಲಿ. ಮಂತ್ರಿಗಳಿಂದ, ಸೆಂಟ್ರಲ್ ಗವರ್ನಮೆಂಟ್ ಅಧಿಕಾರಿಗಳಿಂದ, ಅವರ ಸರ್ಕಾರ ಇರುವ ಎಲ್ಲಾ ರಾಜ್ಯ ಸರ್ಕಾರದಿಂದ ಶುರು ಮಾಡಲಿ. ಅವರ ಶಾಸಕರು, ಕಾರ್ಯಕರ್ತರು, ಮುಖಂಡರಿಂದ ತ್ಯಾಗ ಶುರು ಮಾಡಲಿ. ಆ ಮೇಲೆ ಬೇರೆಯವರು ತ್ಯಾಗ ಮಾಡಲಿ ಎಂದು ಹೇಳಿದರು.




