Mysore
26
broken clouds

Social Media

ಬುಧವಾರ, 15 ಏಪ್ರಿಲ 2026
Light
Dark

ಭಾಗವತ್‌ ಸಲಹೆ ದೇಶಕ್ಕೆ ಮಾರಕ : ಎಚ್‌ಸಿಎಂ

h c mahadevappa reaction on nikhil kumaraswamy statement

ಬೆಂಗಳೂರು : ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತಿರುವುದು ಭಾರತದಂತಹ ಅಭಿವೃದ್ಧಿಶೀಲ ದೇಶದ ಬೆಳವಣಿಗೆಗೆ ಮಾರಕವಾದಂತಹ ಅಂಶವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಜನಸಂಖ್ಯೆಯ ನಿಯಂತ್ರಣ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಽಸಿದಂತೆ ೧೯೫೧ರ ಪಂಚ ವಾರ್ಷಿಕ ಯೋಜನೆಯ ಕಾಲದಿಂದ ೧೯೯೩ರ ಎಂ.ಎಸ್.ಸ್ವಾಮಿನಾಥನ್ ಅವರ ರಾಷ್ಟ್ರೀಯ ಜನಸಂಖ್ಯಾ ನೀತಿಯಿಂದ ಮುಂದುವರಿದು ೧೯೯೭ರ ಕುಟುಂಬ ಕಲ್ಯಾಣ ಯೋಜನೆಯವರೆಗೆ ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಽಸಿದಂತೆ ನಮ್ಮ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ.

ಜನಸಂಖ್ಯೆ ರಾಷ್ಟ್ರೀಯ ಸಂಪನ್ಮೂಲವಾಗಿದ್ದರೂ ಕೂಡಾ ಜನಸಂಖ್ಯಾ ಸೋಟ ರಾಷ್ಟ್ರೀಯ ವಿಪತ್ತಿಗೆ ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಒಂದು ದೇಶದ ಜನರ ತಲಾ ಆದಾಯ ಕುಗ್ಗುತ್ತದೆ, ಅಪೌಷ್ಟಿಕತೆ ನಿರ್ವಹಣೆ ಕಷ್ಟವಾಗುತ್ತದೆ ಮತ್ತು ಸಾಕ್ಷರತೆಯ ಪ್ರಮಾಣವು ಕುಂಠಿತವಾಗುವ ಸಾಧ್ಯತೆಯಿರುತ್ತದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವಾಗ ಜನರಿಗೆ ಅಸಮರ್ಪಕತೆಯನ್ನು ಎದುರಿಸಬೇಕಾಗುತ್ತದೆ.

ಪ್ರಸ್ತುತ ನಮ್ಮ ದೇಶದ ಜನಸಂಖ್ಯೆಯು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಜಾತಿ, ಧರ್ಮವನ್ನು ಮೀರಿ ಕುಟುಂಬ ಕಲ್ಯಾಣದ ಸೂತ್ರಗಳನ್ನು ಜನರಿಗೆ ಹೇಳಬೇಕಾಗಿರುವ ವೇಳೆ ಎಲ್ಲವನ್ನೂ ಧರ್ಮದ ಕಣ್ಣಲ್ಲಿ ನೋಡುತ್ತಾ, ಭಗವತ್ ಅವರು ಅವಿವೇಕದ ಸಲಹೆಯನ್ನು ನೀಡುತ್ತಿರುವುದು ದೇಶವನ್ನು ಮೌಢ್ಯತೆ ಮತ್ತು ಅವೈಜ್ಞಾನಿಕತೆಯ ಕಡೆಗೆ ಕೊಂಡೊಯ್ಯುವಂತಾಗಿದೆ.

ಜನಸಂಖ್ಯಾ ನಿಯಂತ್ರಣ ಎಂಬುದು ಎಲ್ಲರೂ ವಿವೇಕಪೂರ್ಣವಾಗಿ ನಿರ್ಧರಿಸಬೇಕಾದ ಸಂಗತಿಯಾಗಿದ್ದು, ಇದು ಹಿಂದೂ, ಮುಸ್ಲಿಂ, ಕ್ರೆ ಸ್ತ, ಪಾರ್ಸಿ ಎನ್ನದೇ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಇರಬೇಕಾದ ರಾಷ್ಟ್ರೀಯ ತಿಳಿವಳಿಕೆ ಆಗಿದೆ. ಮೋಹನ್ ಭಾಗವತ್ ಅವರಯ ಇನ್ನುಮುಂದಾದರೂ ಇಂತಹಾ ಅವಿವೇಕದ ಸಲಹೆಗಳನ್ನು ನೀಡುವುದನ್ನು ನಿಲ್ಲಿಸಲಿ.

Tags:
error: Content is protected !!