ಬೆಂಗಳೂರು: ಮುಂದಿನ ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಬಿಲ್‌ಗೆ ಸಂಬಂಧಿಸಿದ ವರದಿಯನ್ನು ರಿಜ್ವಾನ್ ಅರ್ಷದ್ ಸಮಿತಿ ಸ್ಪೀಕರ್‌ಗೆ ನೀಡಿದ್ದಾರೆ. ಈ ಬಿಲ್ ಕುರಿತು ಬಿಜೆಪಿ ತೀವ್ರ ವಿರೋಧ ಮಾಡುತ್ತಿದೆ. ಬಿಜೆಪಿ ಅವರಿಗೆ ಬೆಂಗಳೂರು ಅಭಿವೃದ್ದಿ ಬೇಕಿಲ್ಲ, ವೋಟ್ ಮಾತ್ರ ಬೇಕು ಎಂದು ಕಿಡಿಕಾರಿದರು.
ಮೇ ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ. ನನ್ನ ಪ್ರಕಾರ ಬೆಂಗಳೂರು ಅಭಿವೃದ್ದಿ ಆಗಬೇಕಾದರೆ 2-3 ಪಾಲಿಕೆ ಆಗಬೇಕು. ಈಗಿನ ಬೆಂಗಳೂರನ್ನು ಒಬ್ಬ ಮೇಯರ್, ಕಮಿಷನರ್ ಆಡಳಿತ ಮಾಡಲು ಸಾಧ್ಯವಿಲ್ಲ. ಆದ ಕಾರಣ, ಗ್ರೇಟರ್ ಬೆಂಗಳೂರು ಅದರೆ ವಾರ್ಡ್ ಜಾಸ್ತಿ ಆಗಬಹುದು ಎಂದು ತಿಳಿಸಿದರು.





