ಬೆಂಗಳೂರು: ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಭಾರತದ ಸಂವಿಧಾನ, ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಎಂದಿಗೂ ಒಪ್ಪುವುದಿಲ್ಲ. ಅವರು ಸಂವಿಧಾನ ವಿರೋಧಿಗಳು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಜನವರಿ.17) ಈ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಸಂವಿಧಾನ ಹಾಗೂ ತ್ರಿವರ್ಣ ಧ್ವಜವನ್ನು ಗೌರವಿಸದೇ ಇರುವವರೇ ಭಾರತ ದೇಶದ ನಿಜವಾದ ತಾಲಿಬಾನ್‌ಗಳು ಎಂದು ಕಿಡಿಕಾರಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಎಲ್ಲ ವಿಚಾರದಲ್ಲೂ ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡುವುದು ಬಿಜೆಪಿಯವರಿಗೆ ಫ್ಯಾಷನ್ ಆಗಿದೆ. ಈ ರೀತಿ ಹೇಳಿಕೆ ನೀಡುವುದರಿಂದ ಆರ್‌ಎಸ್ಎಸ್ ಹಾಗೂ ಬಿಜೆಪಿಯವರು ಸಂವಿಧಾನ ಹಾಗೂ ಅಂಬೇಡ್ಕರ್‌ರವರ
ವಿರೋಧಿಗಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇನ್ನೂ ಭಾಗವತ್ ಯಾರು? ಅವರು ಯಾವ ಸಂವಿಧಾನದ ಹುದ್ದೆ ನಿಭಾಯಿಸಿದ್ದಾರೆ? ಎಂದು ಪ್ರಶ್ನಿಸಿದರು.
ಇನ್ನೂ ಆರ್‌ಎಸ್‌ಎಸ್ ಎಲ್ಲಿಯೂ ನೋಂದಣಿ ಆಗಿಲ್ಲ. ಆದರೆ ಇವರು ದೇಶದ ಬೇರೆ ಬೇರೆ ಭಾಗಗಳಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದು, ನಮ್ಮ ತೆರಿಗೆ ಹಣದಲ್ಲಿ ಅವರಿಗೆ ಝಡ್‌ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅಲ್ಲದೇ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಂದಿಗೂ ಎಂದಿಗೂ ರಾಷ್ಟ್ರಧ್ವಜ
ಒಪ್ಪಿಲ್ಲ. ಹೀಗಾಗಿ ಯಾರು ಭಾರತದ ಸಂವಿಧಾನ ಒಪ್ಪುವುದಿಲ್ಲವೋ ಅವರೆಲ್ಲಾ ತಾಲಿಬಾನಿಗಳು. ಭಾರತ ದೇಶದಲ್ಲಿ ಸಂವಿಧಾನ ಇರುವವರೆಗೂ ದೇಶ ಒಂದಾಗಿರುತ್ತೆ ಎಂದು ಹೇಳಿದರು.