Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕಿಗೆ ಉಪನ್ಯಾಸಕರಿಂದಲೇ ಲೈಂಗಿಕ ಕಿರುಕುಳ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕಿಗೆ ಉಪನ್ಯಾಸಕರೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಐವರು ಅತಿಥಿ ಉಪನ್ಯಾಸಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅತಿಥಿ ಉಪನ್ಯಾಸಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಐವರು ಅತಿಥಿ ಉಪನ್ಯಾಸಕರ ವಿರುದ್ಧ ಕೇಸ್‌ ದಾಖಲಾಗಿದೆ.

ಉಪನ್ಯಾಸಕರಾದ ಸ್ವರೂಪ್‌ ಕುಮಾರ್‌, ರಾಮಾಂಜನೇಯ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಅತಿಥಿ ಉಪನ್ಯಾಸಕರ ಹಲವು ವಿಡಿಯೋಗಳು ವೈರಲ್‌ ಆಗಿವೆ.

ಇದನ್ನು ಓದಿ : ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ದಾಳಿಯಿಂದ 97 ಮಂದಿ ಸಾವು: ಸಚಿವ ಈಶ್ವರ್‌ ಖಂಡ್ರೆ

ಮಕ್ಕಳಿಗೆ ಪಾಠ ಮಾಡುವ ಉಪನ್ಯಾಸಕರೇ ಕಾಲೇಜಿಗೆ ಕುಡಿದು ಬಂದು ಡ್ಯಾನ್ಸ್‌ ಮಾಡುತ್ತಿರುವ, ಅಂಧ ವಿದ್ಯಾರ್ಥಿನಿಯನ್ನು ಎತ್ತಿಕೊಂಡು ಕುಣಿಯುತ್ತಿರುವ ವಿಡಿಯೋ ವೈರಲ್‌ ಆಗಿವೆ.

ಅತಿಥಿ ಉಪನ್ಯಾಸಕ ರಾಮಾಂಜನೇಯ ವಿವಿ ಆವರಣದಲ್ಲಿ ಶರ್ಟ್‌ ಬಿಚ್ಚಿ ಡ್ಯಾನ್ಸ್‌ ಮಾಡಿದ್ದಾನೆ. ಅಲ್ಲದೇ ರಾಮಾಂಜನೇಯ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಇಂಟರ್ನಲ್‌ ಮಾರ್ಕ್ಸ್‌ ನೀಡಲು ಹಣಕ್ಕೆ ಬೇಡಿಕೆ, ಅಂಬೇಡ್ಕರ್‌ ಜಯಂತಿ ಆಚರಣೆ ವೇಳೆ ವಿದ್ಯಾರ್ಥಿನಿ ಜೊತೆ ಡ್ಯಾನ್ಸ್‌, ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿವೆ.

Tags:
error: Content is protected !!