ಬೆಂಗಳೂರು : ರಾಜಧಾನಿಯಲ್ಲಿ ಡೆಂಗ್ಯೂ ಗೆ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಈ ಮೂಲಕ ಡೆಂಗ್ಯೂನಿಂದ ಸಾವಿಗೀಡಾದರವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಶುಕ್ರವಾರದಂದು ಇಬ್ಬರು ಸಾವನ್ನಪ್ಪಿದ್ದರು. ಇದೀಗ ಕಗ್ಗದಾಸಪುರದ ೨೭ ವರ್ಷದ ಯುವಕ ಮೃತಪಟ್ಟಿರುವ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ.
ಇನ್ನು ಶುಕ್ರವಾರ ಮೃತಪಟ್ಟ ೮೦ ವರ್ಷದ ವೃದ್ಧೆಯ ಸಾವಿಗೆ ಡೆಂಗ್ಯೂ ಕಾರಣವಲ್ಲ, ಕ್ಯಾನ್ಸರ್ ಕಾರಣ ಅಂತ ಬಿಬಿಎಂಪಿ ಹೆಲ್ತ್ ಆಡಿಟ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಹೊಸದಾಗಿ ೨೧೩ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ ೧೭೪೨ ಜನರಲ್ಲಿಸೋಂಕು ದೃಢವಾಗಿದೆ.