ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
ರನ್ಯಾರಾವ್ ಪತಿ ಜತಿನ್ ಹುಕ್ಕೇರಿ ಈ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬ ಅನುಮಾನವೂ ಇದ್ದು, ರನ್ಯಾ ರಾವ್ ಒಂದೇ ವರ್ಷದಲ್ಲಿ 28 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಗೆದಷ್ಟು ಮಾಹಿತಿಗಳು ಬಯಲಾಗುತ್ತಿದೆ. ಇದೀಗ 2022ರ ಏಪ್ರಿಲ್.27 ಹಾಗೂ 28ರಂದು ರನ್ಯಾ ಅಕೌಂಟ್‌ಗೆ 10 ಲಕ್ಷ ಹಣ ಸಂದಾಯವಾಗಿದೆ.
ಇದ್ದಕ್ಕಿದ್ದಂತೆ 4 ಲಕ್ಷ, 1 ಲಕ್ಷ, 5 ಲಕ್ಷದಂತೆ ಒಟ್ಟು 10 ಲಕ್ಷ ಹಣ ರನ್ಯಾ ಅಕೌಂಟ್‌ಗೆ ಸಂದಾಯವಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾರಾವ್‌ಗೆ ಮಾರ್ಚ್.24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.