Mysore
26
overcast clouds

Social Media

ಮಂಗಳವಾರ, 29 ಸೆಪ್ಟೆಂಬರ್ 2026
Light
Dark

ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್‌ ಹಂದಿಜ್ವರ ದೃಢ

pig

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್‌ ಹಂದಿಜ್ವರ ದೃಢವಾಗಿದೆ.

ವೆಂಕಟರೆಡ್ಡಿ ಎಂಬುವವರಿಗೆ ಸೇರಿದ ಹಂದಿಗಳ ಫಾರಂನಲ್ಲಿ 200 ಹಂದಿಗಳಿದ್ದು, ಅನುಮಾನಾಸ್ಪದವಾಗಿ ಹಂದಿಗಳು ಸಾವನ್ನಪ್ಪಲು ಆರಂಭಿಸಿವೆ.

ಆಗಸ್ಟ್.‌14ರಿಂದಲೇ ಹಂದಿಗಳು ಸಾವನ್ನಪ್ಪುತ್ತಿದ್ದು, ಸತ್ತ ಹಂದಿಗಳನ್ನು ಸಮೀಪದ ಹೆಬ್ಬರಿ ಗ್ರಾಮದ ಕೆರೆಗೆ ಬಿಸಾಡಲಾಗಿದೆ. ಪರಿಣಾಮ ಹಂದಿಗಳು ಕೊಳೆತು ದುರ್ವಾಸನೆ ಬೀರುತ್ತಿವೆ. ಇದರಿಂದ ಇಡೀ ಕೆರೆಯ ನೀರು ಮಲಿನವಾಗಿದೆ.

ಪಶುಪಾಲನಾ ಇಲಾಖೆ ಅಧಿಕಾರಿಗಳು ಸತ್ತ ಹಂದಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಹಂದಿ ಜ್ವರ ದೃಢಪಟ್ಟಿದೆ. ಘಟನೆ ಬಳಿಕ ಫಾರಂನಲ್ಲಿದ್ದ 57 ಹಂದಿಗಳನ್ನು ಸಾಮೂಹಿಕ ಹತ್ಯೆ ನಡೆಸಲಾಗಿದೆ. ಮತ್ತೊಂದೆಡೆ ತಾಲ್ಲೂಕು ಆಡಳಿತ ಕೆರೆಯಲ್ಲಿ ಬಿಸಾಡಿರುವ ಹಂದಿಯ ಮೃತದೇಹದ ಕಳೇಬರಗಳನ್ನು ಜೆಸಿಬಿ ಮೂಲಕ ತೆಗೆದು ಮಣ್ಣಿನಲ್ಲಿ ಮುಚ್ಚಿ ಹಾಕುತ್ತಿದೆ.

Tags:
error: Content is protected !!