Mysore
26
few clouds

Social Media

ಗುರುವಾರ, 05 ಡಿಸೆಂಬರ್ 2024
Light
Dark

ಪ್ರೊ. ಭಗವಾನ್‌ ಮುಖಕ್ಕೆ ಮಸಿ| ವಕೀಲೆ ಮೀರಾ ರಾಘವೇಂದ್ರ ಬಾರ್‌ ಕೌನ್ಸಿಲ್‌ನಿಂದ ಅಮಾನತು

ಬೆಂಗಳೂರು: ಚಿಂತಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಎಸ್.ಭಗವಾನ್‌ ಅವರ ಮುಖಕ್ಕೆ ಕೋರ್ಟ್‌ ಅಂಗಳದಲ್ಲೇ ಮಸಿ ಬಳಿದಿದ್ದ ವಕೀಲೆ ಮೀರಾ ರಾಘವೇಂದ್ರರನ್ನು ಬಾರ್‌ ಕೌನ್ಸಿಲ್‌ನಿಂದ ಅಮಾನತು ಮಾಡಲಾಗಿದೆ.

ಶ್ರೀರಾಮ ದೇವರನ್ನು ನಿಂದಿಸಿ ಬರೆದಿದ್ದಾರೆ ಎಂದು ಆರೋಪಿಸಿ ೨ನೇ ಎಸಿ ಎಂಎಂ ನ್ಯಾಯಾಲದಲ್ಲಿ ವಕೀಲೆ ಮೀರಾ ರಾಘವೇಂದ್ರ ಪ್ರಕರಣ ದಾಖಲಿಸಿದ್ದರು. ಸದರಿ ಪ್ರಕರಣದಲ್ಲಿ ಫೆ.4 2021 ರಂದು ನ್ಯಾಯಾಲದಲ್ಲಿ ಹಾಜರಾಗಿ ಜಾಮೀನು ಪಡೆದು ಹೊರಬರುತ್ತಿದ್ದ ಭಗವಾನ್‌ ಅವರ ಮುಖಕ್ಕೆ ಮಸಿ ಬಳಿದು ಭಗವಾನ್‌ ಅವರನ್ನೂ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನು ಹಾಕಿದ್ದರು.

ಇದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಭಗವಾನ್‌ ಅವರು ಕರ್ನಾಟಕ ಬಾರ್‌ ಕೌನ್ಸಿಲ್‌ ನಲ್ಲಿ ಅವರ ವಿರುದ್ಧ ದೂರು ದಾಖಲಿಸಿದರು.

ದೂರಿಗೆ ಸಂಬಂಧಿಸಿದಂತೆ ಮೀರಾ ರಾಘವೇಂದ್ರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ರಿಜಿಸ್ಟರ್ಡ್‌ ಕಳುಹಿಸಿದ್ದರು ಇದಕ್ಕೆ ಸ್ಪಂದಿಸಿರಲಿಲ್ಲ. ಇವರ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಿದ ಬಾರ್‌ ಕೌನ್ಸಿಲ್‌ ವೃತ್ತಿಪರರಾಗಿ ಕೆಲಸ ಮಾಡುವ ಮೀರಾ ಅವರೇ ದೂರಿನ ಬಗ್ಗೆ ವಿಚಾರಿಸದೇ ಕೋರ್ಟ್‌ಗೆ ಹಾಜರಾಗದೇ ಅವರು ಬಾರ್‌ ಕೌನ್ಸಿಲ್‌ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ಹಾಗೇಯೇ ವಕೀಲರ ಸಮವಸ್ತ್ರದಲ್ಲಿದ್ದುಕೊಂಡೇ ಈ ರೀತಿ ನಡೆದುಕೊಂಡಿರುವುದು ಅವರ ದುರ್ನಡತೆಯನ್ನು ತೋರಿಸುತ್ತದೆ. ವೃತ್ತಿಯ ಶಿಷ್ಟಾಚಾರಕ್ಕೆ ಅಪಮಾನಮಾಡಿದ್ದು, ಅವರಿಗೆ ಮೂರು ತಿಂಗಳ ಕಾಲ ಕರ್ನಾಟಕ ರಾಜ್ಯ ಹಾಗೂ ದೇಶದ ಯಾವುದೇ ನ್ಯಾಯಾಲಯಗಳಲ್ಲಿ ವಕೀಲಿಕೆ ಮಾಡಬಾರದು ಎಂದು ಕರ್ನಾಟಕದ ಬಾರ್‌ ಕೌನ್ಸಿಲ್‌ ನ.20 2024ರಂದು ಆದೇಶ ನೀಡಿದೆ.

ಬಾರ್‌ ಕೌನ್ಸಿಲ್‌ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಭಗವಾನ್‌, ನನಗೂ ಹಾಗೂ ಮೀರಾ ರಘವೇಂದ್ರ ಅವರಿಗೂ ವೈಯುಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ನಾನು ಬರೆದಿರುವ ಪುಸ್ತಕದಿಂದ ಅವರು ಕೋಪಗೊಂಡು ನನ್ನ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು ಆದರೆ ಅವರೇ ಹಾಜರಾಗದ ಕಾರಣ ಅವರ ಸಾಮಾಜಿಕ ಜವಾಬ್ದಾರಿ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಅಷ್ಟೇ. ನಾನು ವಾಲ್ಮೀಕಿ ರಾಮಾಯಣದಲ್ಲಿರುವ ಅಂಶಗಳನ್ನು ಆಧರಿಸಿ ಪುಸ್ತಕವನ್ನು ಬರೆದಿದ್ದೇನೆ ಅವರು ಓದದೇ ಬಾಯಿಗೆ ಬಂದಂತೆ ಮಾತನಾಡಿದರೆ ನಮ್ಮ ತಪ್ಪೇ ಎಂದು ಹೇಳಿದರು.

Tags: