Mysore
33
scattered clouds

Social Media

ಗುರುವಾರ, 21 ಮೇ 2026
Light
Dark

ನಟ ದರ್ಶನ್‌ಗೆ ಇನ್ನೂ ಮೂರುದಿನ ಜೈಲೂಟವೇ ಗತಿ: ತೀರ್ಪು ಕಾಯ್ದಿರಿಸಿದ ಕೋರ್ಟ್‌

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಮನೆಯೂಟ, ಹಾಸಿಗೆ ಹಾಗೂ ಪುಸ್ತಕ ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಜುಲೈ 25 ಕ್ಕೆ ಎಸಿಎಂಎಂ ಕೋರ್ಟ್‌ ಕಾಯ್ದಿರಿಸಿದೆ.

ದರ್ಶನ್‌ ಹೀಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿನ್ನೆಲೆ ಅವರಿಗೆ ಜೈಲು ಊಟ ಆಗುತ್ತಿಲ್ಲ. ಹಾಗಾಗಿ ಮನೆಯೂಟ, ಹಾಸಿಗೆ ಹಾಗೂ ಪುಸ್ತಕ ನೀಡುವಂತೆ ಕೋರಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಈ ಸಂಬಂಧ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಹೀಗಾಗಿ ನಟ ದರ್ಶನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದೆ ಬೆಂಗಳೂರಿನ ಎಸಿಎಂಎಂ ಕೋರ್ಟ್‌, ಅರ್ಜಿ ಕುರಿತು ತೀರ್ಪನ್ನು ಜುಲೈ 25 ರಂದು ಪ್ರಕಟಿಸುವುದಾಗಿ ಹೇಳಿ ಆದೇಶವನ್ನು ಕಾಯ್ದಿರಿಸಿದೆ. ಹೀಗಾಗಿ ನಟ ದರ್ಶನ್‌ಗೆ ಇನ್ನೂ ಮೂರುದಿನ ಜೈಲೂಟವೇ ಗತಿಯಾಗಿದೆ.

 

 

Tags:
error: Content is protected !!