ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವಿಜೇತರಿಗೆ ನೀಡಲಾಗುವ ಬಹುಮಾನದ ಮೊತ್ತವನ್ನು ಬಹಿರಂಗ ಪಡಿಸಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಒಂಬತ್ತು ತಂಡಗಳು 31.4 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಹಂಚಿಕೊಳ್ಳುತ್ತವೆ,
ಲಂಡನ್ ನ ಓವಲ್ ನಲ್ಲಿ ಜೂನ್ 7 ರಿಂದ ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಡಬ್ಲ್ಯು ಟಿಸಿ ಫೈನಲ್ ನ ವಿಜೇತರು ಸುಮಾರು ರೂ 13.22 ಕೋಟಿ ಬಹುಮಾನವನ್ನು ಪಡೆಯುತ್ತಾರೆ. ರನ್ನರ್ ಅಪ್ ತಂಡವು ಸುಮಾರು ರೂ 6.61 ಕೋಟಿ ಪಡೆಯಲಿದ್ದಾರೆ.
ಐದನೇ ಸ್ಥಾನ ಗಳಿಸಿದ ಶ್ರೀಲಂಕಾ ಅಂದಾಜು ರೂ 1.65 ಕೋಟಿ ಗಳಿಸಲಿದೆ. ಉಳಿದ ತಂಡಗಳಾದ ನ್ಯೂಜಿಲೆಂಡ್ (ನಂ.6), ಪಾಕಿಸ್ತಾನ (ನಂ.7), ವೆಸ್ಟ್ ಇಂಡೀಸ್ (ನಂ.8), ಮತ್ತು ಬಾಂಗ್ಲಾದೇಶ (ನಂ.9) ತಲಾ $100,000 ಮೊತ್ತವನ್ನು (ಅಂದಾಜು 82.7 ಲಕ್ಷ ರೂ.) ಬಹುಮಾನವಾಗಿ ನೀಡಲಾಗುವುದು” ಎಂದು ಪ್ರಕಟಣೆ ತಿಳಿಸಿದೆ.
Prize pot for the ICC World Test Championship 2021-23 cycle revealed 💰
Details 👇https://t.co/ZWN8jrF6LP
— ICC (@ICC) May 26, 2023