ನವದೆಹಲಿ: ಟೀಂ ಇಂಡಿಯಾದ ಬಹುಬೇಡಿಕೆಯ ಆಟಗಾರ ವಿರಾಟ್ ಕೊಹ್ಲಿ, 12 ವರ್ಷಗಳ ಬಳಿಕ ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದು ದೆಹಲಿ ತಂಡದ ಪರವಾಗಿ ಮೈದಾನಕ್ಕಿಳಿದಿದ್ದಾರೆ.
ಇಂದು (ಜ.30) ಅರುಣ್ ಜೇಟ್ಲಿ ಮೈದಾನದಲ್ಲಿ ರೈಲ್ವೇಸ್ ತಂಡದ ವಿರುದ್ಧ ಆರಂಭವಾದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೈದಾನಕ್ಕಿಳಿದಿದ್ದಾರೆ. ಈ ವೇಳೆ ಸ್ಟೇಡಿಯಂ ಹೊರಗಡೆ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು ನೂಕುನುಗ್ಗಲು ಉಂಟಾಗಿ ಒಂದಿಬ್ಬರು ಕೆಳಕ್ಕೆ ಬಿದ್ದು ಗಾಯಗಳಾಗಿವೆ ಎಂದು ವರದಿಯಾಗಿದೆ.
ನಾನು 30 ವರ್ಷ ದೆಹಲಿ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದೇನೆ. ಆದರೆ ರಣಜಿ ಪಂದ್ಯವೊಂದರಲ್ಲಿ ಇಂತಹ ದೃಶ್ಯಗಳನ್ನು ನೋಡಿರಲಿಲ್ಲ. ಇದು ಕೊಹ್ಲಿ ಜನಪ್ರಿಯತೆಗೆ ಸಾಟಿಯಿಲ್ಲ ಎಂದು ತೋರಿಸುತ್ತದೆ ಎಂದು ಡಿಡಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಹ್ಲಿ ಕೊನೆಯದಾಗಿ 2012ರಲ್ಲಿ ಉತ್ತರ ಪ್ರದೇಶದ ವಿರುದ್ಧ ಆಡಿದ್ದರು.