Mysore
23
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ನಿಂದ ಪಿವಿ. ಸಿಂಧು ಹೊರಗುಳಿಯುವ ಸಾಧ್ಯತೆ

ನವದೆಹಲಿ: ಎರಡು ಬಾರಿ ಒಲಂಪಿಕ್ ಪದಕ ವಿಜೇತೆಯಾಗಿರುವ ಪಿವಿ ಸಿಂಧು ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ 2022 ರ ಸ್ಪರ್ಧೆಯಿಂದಾಗಿ ಎಡಪಾದದ ಗಾಯದಿಂದ ಬಳಲುತ್ತಿದ್ದು, ನಾನು ಭಾರತಕ್ಕಾಗಿ ಕಾಮನ್ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಸನಿಹದಲ್ಲಿರುವಾಗ ಅನಿವಾರ್ಯವಾಗಿ  ನಾನು ವಿಶ್ವ ಚಾಂಪಿಯನ್  ಹೊರ ಉಳಿಯಬೇಕಾಗಿದೆ. ನಾನು ತುಂಬಾ ನೋವನ್ನು ಅನುಭವಿಸಿದೆ.

ಕ್ವಾರ್ಟರ್ ಫೈನಲ್ ನಲ್ಲಿ ಗಾಯದ ಭಯವಿತ್ತು. ಆದರೆ ನನಗೆ ನನ್ನ ಕೋಚ್ ಫಿಸಿಯೋ ಮತ್ತು ತರಬೇತುದಾರರ ಸಹಾಯದಿಂದ ನಾನು ಸಾಧ್ಯವಾದಷ್ಟು ಮುಂದುವರಿದೆ. ಫೈನಲ್ ನಲ್ಲಿ ಮತ್ತು ನಂತರದ ಸಮಯದಲ್ಲಿ ಅಸಹನೀಯವಾದ ನೋವು ನನಗೆ ಗೊತ್ತು ಆದ್ದರಿಂದ ನಾನು ಹೈದರಾಬಾದ್ ಗೆ ಹಿಂತಿರುಗಿ ತಕ್ಷಣ ಂ ಎಂ ಆರ್ ಐ ಗೆ ಧಾವಿಸಿದೆ. ವೈದ್ಯರು ನನ್ನ ಎಡ ಪಾದದ ಮೇಲಿನ ಒತ್ತಡವನ್ನು ದೃಡಪಡಿಸಿದ್ದು. ಕೆಲವು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಹೇಳಿದರು. ನಾನು ಕೆಲವು ವಾರಗಳ ನಂತರ ಮತ್ತೆ ತರಬೇತಿಗೆ ಮರಳಬೇಕು. ನಿಮ್ಮ ಬೆಂಬಲ ಮತ್ತು ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದಗಳು. ಎಂದು ಟ್ವೀಟ್ ನಲ್ಲಿ ಪೋಸ್ಟ್ ಮೂಲಕ ಹೇಳಿದ್ದಾರೆ.

ವಿಶ್ವ ಚಾಂಪಿಯನ್ ಶಿಪ್ 2022 ಆಗಸ್ಟ್ 21 ರಂದು ಟೋಕಿಯೋ ದಲ್ಲಿ ಪ್ರಾರಂಭವಾಗಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ