ರಾವಲ್ಪಿಂಡಿ: ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಗಾಲು ಹಾಕಿದೆ.
ರಾವಲ್ಪಿಂಡಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗುವ ಕೆಲವೇ ಕ್ಷಣಗಳಲ್ಲಿ ಮಳೆ ಸುರಿದಿದ್ದರಿಂದ ಟಾಸ್ ವಿಳಂಬವಾಗಿದೆ.
ಸಮಯ 4ರ ನಂತರದಲ್ಲೂ ತುಂತುರ ಹನಿ ಬೀಳುತ್ತಿರುವುದರಿಂದ ಪಂದ್ಯ ಆರಂಭವಾಗುವ ಸಮಯಕ್ಕೆ ಕಾಯಬೇಕಿದ್ದು, ಓವರ್ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ.