ಪ್ಯಾರಿಸ್: ವಿಶ್ವಕಪ್ ವಿಜೇತ ಅರ್ಜೆಂಟೀನ ಫುಟ್ ಬಾಲ್ ತಂಡದ ನಾಯಕ, ಪ್ಯಾರಿಸ್ ಸೇಂಟ್ ಜರ್ಮೈನ್‌ನ (ಪಿಎಸ್‌ಜಿ) ಪ್ರಮುಖ ಆಟಗಾರ ಲಯೋನೆಲ್ ಮೆಸ್ಸಿಗೆ ಎರಡು ವಾರ ನಿಷೇಧ ಹಾಕಲಾಗಿದೆ.
ಅವರು ಅನಧಿಕೃತವಾಗಿ, ತಂಡಕ್ಕೆ ತಿಳಿಸದೇ 2 ದಿನಗಳ ಕಾಲ ಸೌದಿ ಅರೇಬಿಯಕ್ಕೆ ತೆರಳಿದ್ದರು. ಇದನ್ನು ಪಿಎಸ್‌ಜಿ ಗಂಭೀರವಾಗಿ ಪರಿಗಣಿಸಿದೆ.
ಮೆಸ್ಸಿ ಕೆಲವು ಪಂದ್ಯಗಳು ಪಿಎಸ್‌ಜಿ ಪರ ಆಡುವುದಿಲ್ಲ. ಮೇ 21ರಂದು ಆಕ್ಷೆರ್ ತಂಡದ ವಿರುದ್ಧ ನಡೆಯುವ ಪಂದ್ಯದ ಮೂಲಕ ತಂಡಕ್ಕೆ ಮರಳುವ ಸಾಧ್ಯತೆಯಿದೆ.
ಅದಕ್ಕಿಂತ ಕುತೂಹಲಕಾರಿ ಸಂಗತಿಯೆಂದರೆ ಕ್ರಿಸ್ಟಿಯಾನೊ ರೊನಾಲ್ಡೊರಂತೆ ಮೆಸ್ಸಿ ಕೂಡ ಸೌದಿ ಅರೇಬಿಯ ತಂಡಕ್ಕೆ ವಲಸೆ ಹೋಗುವ ಸಾಧ್ಯತೆಯಿದೆ ಎಂದು ಸುದ್ದಿ ಹಬ್ಬಿದ್ದು. ಅದು ಬರೀ ಸುದ್ದಿಯಲ್ಲ ಸ್ವತಃ ಮೆಸ್ಸಿ ಗಂಭೀರವಾಗಿಯೇ ಮಾತುಕತೆ ನಡೆಸಿದ್ದಾರೆಂದು ಕೆಲವು ಮೂಲಗಳು ಹೇಳಿವೆ