Mysore
28
light rain

Social Media

ಬುಧವಾರ, 25 ಜೂನ್ 2025
Light
Dark

Paris Olympics 2024: ವಿನೇಶ್‌ ಫೋಗಟ್‌ ಪ್ರಕರಣದ ತೀರ್ಪು ಇಂದು!

ಪ್ಯಾರಿಸ್‌: ಇಲ್ಲಿ ನಡೆದ 2024ರ ಒಲಂಪಿಕ್ಸ್‌ನಲ್ಲಿ ಅನರ್ಹಗೊಂಡಿದ್ದ ಭಾರತದ ಕುಸ್ತಿಪಟು ವಿನೇಶ್‌ ಫೋಗಾಟ್‌ ಅವರ ಪ್ರಕರಣದ ತೀರ್ಪು ಇಂದು (ಮಂಗಳವಾರ, ಆ.13) ಪ್ರಕಟವಾಗಲಿದೆ.

ತಮ್ಮ ಮೇಲಿನ ಅನರ್ಹತೆಯನ್ನು ಪ್ರಶ್ನಿಸಿದ್ದ ಫೋಗಾಟ್‌ ಅವರು ಕ್ರೀಡಾ ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ಈ ಪ್ರಸಕ್ತ ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಪರವಾಗಿ ಮಹಿಳೆಯರ 50ಕೆಜಿ ಫ್ರೀ ಸ್ಟೈಲ್‌ ಕುಸ್ತಿಯಲ್ಲಿ ಭಾಗವಹಿಸಿದ್ದ ವಿನೇಶ್‌ ಫೋಗಟ್‌ ಅವರು ಫೈನಲ್ಸ್‌ ತಲುಪಿದ್ದರು. ಇದಾದ ಬಳಿಕ ಫೈನಲ್ಸ್‌ಗೂ ಮುನ್ನಾ ನಡೆಸಿದ ತೂಕ ಪರೀಕ್ಷೆಯಲ್ಲಿ 50 ಗ್ರಾಂ ಹೆಚ್ಚಿನ ತೂಕ ಹೊಂದಿದ್ದರು ಎಂದು ಅವರನ್ನು ಫೈನಲ್ಸ್‌ನಿಂದ ಅನರ್ಹಗೊಳಿಸಿದ್ದರು. ಇದರಿಂದಾಗಿ ಪದಕ ಖಚಿತವಾಗಿದ್ದ ಭಾರತಕ್ಕೆ ನಿರಾಸೆ ಉಂಟಾಗಿತ್ತು.

ಫೈನಲ್ಸ್‌ ವರೆಗೂ ದೇಹ ತೂಕ ನಿರ್ವಹಣೆ ಮಾಡಿದ್ದ ವಿನೇಶ್‌ ಅವರಿಗೆ ಬೆಳ್ಳಿ ಪದಕವನ್ನಾದರೂ ಕೊಡಬೇಕು ಎಂದು ಮೇಲ್ಮನವಿ ಸಲ್ಲಿಸದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಒಲಂಪಿಕ್ಸ್‌ ಕ್ರೀಡಾ ನ್ಯಾಯ ಮಂಡಳಿ ತೀರ್ಪನ್ನು 13ಕ್ಕೆ ಕಾದಿರಿಸಿತ್ತು.

Tags:
error: Content is protected !!