ಪ್ಯಾರಿಸ್: ಭಾರತಕ್ಕೆ ಮೂರನೇ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಸ್ವಪ್ನಿಲ್‌ಗೆ ಬರೋಬ್ಬರಿ 1 ಕೋಟಿ ರೂ ಬಹುಮಾನ ಘೋಷಿಸಲಾಗಿದೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ನಪ್ನಿಲ್ ಕುಸಾಲೆ ಇತಿಹಾಸ ನಿರ್ಮಿಸಿದ್ದಾರೆ. 50 ಮೀಟರ ರೈಫಲ್ ಈವೆಂಟ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡುವ ಮೂಲಕ ಸ್ವಪ್ನಿಲ್ ಭಾರತದ ಪದಕಗಳ ಸಂಖ್ಯೆಯನ್ನು ಮೂರಕ್ಕೇರಿಸಿದ್ದಾರೆ.
ಇವರ ಗೆಲುವಿನಿಂದ ಇಡೀ ದೇಶದಲ್ಲಿ ಸಂತಸದ ಅಲೆ ಎದ್ದಿದ್ದು, ಪ್ರಧಾನಿ ಮೋದಿ ಸ್ವಪ್ನಿಲ್‌ಗೆ ಕರೆ ಮಾಡಿ ಶುಭಾಷಯ ತಿಳಿಸಿದ್ದಾರೆ. ಭಾರತಕ್ಕೆ ಮೂರನೇ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಸ್ವಪ್ನಿಲ್‌ಗೆ ಬರೋಬ್ಬರಿ 1 ಕೋಟಿ ರೂ ಬಹುಮಾನ ಘೋಷಿಸಲಾಗಿದೆ.





