Mysore
29
clear sky

Social Media

ಮಂಗಳವಾರ, 21 ಜನವರಿ 2025
Light
Dark

ಬಾಬರ್‌ ಅಝಮ್‌ ಗೆ ಜರ್ಸಿ ನೀಡಿ ಮತ್ತೆ ಮನಗೆದ್ದ ಕೊಹ್ಲಿ: ವಿಡಿಯೋ ನೋಡಿ

ಅಹ್ಮದಾಬಾದ್ : ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಸಂಬಂಧಗಳು ಹದಗೆಟ್ಟಿದ್ದರೂ, ಕ್ರೀಡಾ ಜಗತ್ತು ಆ ಸಂಬಂಧವನ್ನು ಮೀರಿ ಬೆಳೆದು ನಿಂತಿದೆ. ಇಂಥ ಒಂದು ಹೃದಯಸ್ಪರ್ಶಿ ಕ್ಷಣಕ್ಕೆ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ವಿಶ್ವಕಪ್ 2023 ಪಂದ್ಯ ಸಾಕ್ಷಿಯಾಯಿತು.

ಪಾಕಿಸ್ತಾನವು 7 ವಿಕೆಟ್‌ಗಳಿಂದ ಪಂದ್ಯವನ್ನು ಸೋತಿತ್ತು. ಪಂದ್ಯದ ಬಳಿಕ ವಿರಾಟ್‌ ಕೊಹ್ಲಿ – ಬಾಬರ್ ಅಝಮ್‌ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಈ ಸಂದರ್ಭ ಕೊಹ್ಲಿ, ಬಾಬರ್‌ ಗೆ ಸಹಿ ಮಾಡಿದ ಜೆರ್ಸಿಯನ್ನು ನೀಡಿದಾಗ, ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಝಮ್ ಮುಖದಲ್ಲಿ ಪಂದ್ಯ ಗೆದ್ದಷ್ಟೇ ಖುಷಿ ಕಂಡು ಬಂತು.

ಈ ಕ್ರೀಡಾ ಸೌಹಾರ್ದತೆಯ ಕ್ಷಣವನ್ನು ʼxʼ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ವೈರಲ್‌ ಆಗಿದೆ. ಕ್ರೀಡಾಂಗಣ, ಗಡಿ ಮೀರಿದ ಕೊಹ್ಲಿಯ ಕ್ರೀಡಾ ವೈಶಾಲ್ಯತೆ ಕ್ರೀಡಾ ಪ್ರೇಮಿಗಳ ಮನ ಗೆದ್ದಿದೆ.

https://x.com/RVCJ_FB/status/1713217806467264713?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ