Mysore
23
overcast clouds

Social Media

ಭಾನುವಾರ, 02 ಆಗಸ್ಟ್ 2026
Light
Dark

ಅಮೆರಿಕ-ಇರಾನ್ ಶಾಂತಿ ಒಪ್ಪಂದ : ಕಚ್ಚಾ ತೈಲ ಬೆಲೆ ಭಾರೀ ಇಳಿಕೆ

ವಾಷಿಂಗ್ಟನ್ : ಅಮೆರಿಕ-ಇರಾನ್ ಸಂಸಂಘರ್ಷವನ್ನು ಕೊನೆಗೊಳಿಸಲು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆಯನ್ನು ಪುನಃಸ್ಥಾಪಿಸಲು ಪ್ರಾಥಮಿಕ ಒಪ್ಪಂದಕ್ಕೆ ಬಂದಿರುವುದಾಗಿ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಉಪ ವಿದೇಶಾಂಗ ಸಚಿವರು ಹೇಳಿದ ಬೆನ್ನಲ್ಲೇ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ.

ಕಚ್ಚಾ ತೈಲ ಬೆಲೆಯಲ್ಲಿ ಶೇ.4ರಷ್ಟು ಕುಸಿತವಾಗಿದೆ. ಅಂದರೆ ಪ್ರತಿ ಬ್ಯಾರಲ್‌ಗೆ ೮೦ ಡಾಲರ್‌ಗೆ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 3.58 ಡಾಲರ್ ಅಥವಾ ಶೇ.4.1ರಷ್ಟು ಇಳಿಯುವ ಮೂಲಕ ಪ್ರತಿ ಬ್ಯಾರಲ್ ಗೆ 83.75 ಕ್ಕೆ ಇಳಿದಿದೆ. ಆದರೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ. 4.01 ಡಾಲರ್ ಅಥವಾ ಶೇ. 4.72 ರಷ್ಟು ಇಳಿದು 80.87 ಡಾಲರ್‌ಗೆ ಕುಸಿದಿದೆ.

ಯುದ್ಧದ ಪರಿಣಾಮದಿಂದ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್ 120 ಡಾಲರ್ ವರೆಗೆ ತಲುಪಿ ದಾಖಲೆಯನ್ನು ಬರೆದಿತ್ತು. ಯುದ್ಧಕ್ಕೂ ಮುನ್ನ ತೈಲ ದರ 70 ಡಾಲರ್‌ನ ಆಸುಪಾಸಿನಲ್ಲಿತ್ತು.

ವಿಶ್ವದ ಶೇ.20ರಷ್ಟು ಕಚ್ಚಾತೈಲವು ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಇರಾನ್ ಹಾರ್ಮುಜ್ ಜಲಸಂಧಿ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆಗಳಲ್ಲಿ ಬಾರಿ ಏರಿಕೆಯಾಗಿತ್ತು. ಹಾಗೆಯೇ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿಯೂ ದರ ಏರಿಕೆಯಾಗಿತ್ತು.

Tags:
error: Content is protected !!